ಮೆಟ್ರೋ ರೈಲಲ್ಲಿ ಮಹಿಳಾ ಟೆಕ್ಕಿ; ಪೋಟೋ ಕ್ಲಿಕ್ಕಿಸಿದ ವೈದ್ಯ

rape-cartoon
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಮೆಟ್ರೋ ರೈಲಿನಲ್ಲಿ ಮಹಿಳಾ ಸಾಫ್ಟ್‌ವೇರ್ ಉದ್ಯೋಗಿಯ ಪೋಟೋ ಕ್ಲಿಕ್ಕಿಸಿದ ಆರ್ಯುವೇದಿಕ್ ವೈದ್ಯ ರಂಪಾಟಕ್ಕೆ ಕಾರಣರಾಗಿದ್ದಾರೆ.

ಜೆ.ಪಿ.ನಗರದ ವೈದ್ಯ ಡಾ.ಮಹೇಶ್ ಎಂಬುವರ ವಿರುದ್ಧ ಆರೋಪ ಕೇಳಿಬಂದಿದ್ದು, ಕಾಡುಗುಡಿಯಿಂದ ಜೆ.ಪಿ. ನಗರಕ್ಕೆ ಮೆಟ್ರೋದಲ್ಲಿ ಬರುವಾಗ ಸಹ ಪ್ರಯಾಣಿಕಳ ಪೋಟೋ ತೆಗೆದಿದ್ದರು. ಇದಕ್ಕೆ ಮಹಿಳಾ ಟೆಕ್ಕಿ ವಿರೋಧ ವ್ಯಕ್ತಪಡಿಸಿದಾಗ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅನುಮತಿ ಇಲ್ಲದೆ ಪೋಟೋ ತೆಗೆದಿದ್ದನ್ನು ಆಕ್ಷೇಪಿಸಿ ಮಹಿಳೆ ‘ನಮ್ಮ-112’ಗೆ ಕರೆ ಮಾಡಿ ದೂರು ಸಲ್ಲಿಸಿದ್ದರು.

ತಕ್ಷಣವೇ ಜಯನಗರ ಮೆಟ್ರೋ ನಿಲ್ದಾಣದಲ್ಲಿ ವೈದ್ಯರನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆತಂದಿದ್ದರು. ಬಳಿಕ ವೈದ್ಯನ ಮೊಬೈಲ್ ಪರಿಶೀಲಿಸಿದಾಗ ಮಹಿಳಾ ಟೆಕ್ಕಿಯ ಪೋಟೋ ಪತ್ತೆಯಾಯಿತು. ಆ ಪೋಟೋ ಆಕ್ಷೇಪಾರ್ಹವಾಗಿರಲಿಲ್ಲ. ಆದರೆ, ತನ್ನ ಅನುಮತಿ ಪಡೆಯದ ಕಾರಣಕ್ಕೆ ಸಂತ್ರಸ್ತೆ ಆಕ್ಷೇಪಿಸಿದರು. ಕೊನೆಗೆ ತಪ್ಪಿಗೆ ವೈದ್ಯ ಕ್ಷಮೆ ಕೋರಿದಾಗ ಪ್ರಕರಣ ಸುಖಾಂತ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net