ವಿಮಾನದಲ್ಲಿ ಮಹಿಳಾ ಪ್ರಯಾಣಿಕಳಿಗೆ ಬಿತ್ತು 64 ಲಕ್ಷ ರೂ ದಂಡ..ಕಾರಣ ಕೇಳಿದ್ರೆ ಶಾಕ್​ ಆಗ್ತೀರ! Delta Airlines

Delta Airlines
Published on

Delta Airlines: ಮಹಿಳಾ ಪ್ರಯಾಣಿಕಳು ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ 64 ಲಕ್ಷ ರೂ ದಂಡ ವಿಧಿಸಿದ ಘಟನೆ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಲಾಸ್ ವೇಗಾಸ್ನಿಂದ ಅಟ್ಲಾಂಟಾಗೆ ಹೊರಟಿದ್ದ ಡೆಲ್ಟಾ ಏರ್ಲೈನ್ಸ್ ವಿಮಾನದಲ್ಲಿ ಮಹಿಳಾ ಪ್ರಯಾಣಿಕಳೊಬ್ಬಳು ತಮ್ಮ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರೊಂದಿಗೆ ಅಸಹಜವಾಗಿ ವರ್ತಿಸಲು ಪ್ರಾರಂಭಿಸಿದರು. ಅವಳು ಇದ್ದಕ್ಕಿದ್ದಂತೆ ತನ್ನ ಪಕ್ಕದ ಪ್ರಯಾಣಿಕನನ್ನು ತಬ್ಬಿಕೊಂಡು ಮುತ್ತನ್ನೀಡಲು ಪ್ರಾರಂಭಿಸಿದಳು. ಇದರಿಂದ ಕೋಪಗೊಂಡ ಪುರುಷ ಪ್ರಯಾಣಿಕ ತಕ್ಷಣ ಮಹಿಳೆಯನ್ನು ತಡೆಯಲು ಪ್ರಯತ್ನಿಸಿದನು ಮತ್ತು ಸಿಬ್ಬಂದಿಗೆ ಕರೆ ಮಾಡಲು ಸೂಚಿಸಿದನು. ದೂರದಿಂದ ಇದನ್ನೆಲ್ಲಾ ನೋಡುತ್ತಿದ್ದ ಗಗನಸಖಿ ಸ್ಥಳಕ್ಕೆ ಓಡಿ ಬಂದರು.

ಗಗನಸಖಿ ಮಹಿಳಾ ಪ್ರಯಾಣಿಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಆ ಮಹಿಳೆ ಶಾಂತವಾಗುವ ಬದಲು ಇನ್ನಷ್ಟು ಕೋಪಗೊಂಡಳು. ಅವಳು ಜೋರಾಗಿ ಕೂಗಲು ಪ್ರಾರಂಭಿಸಿದಳು ಮತ್ತು ವಿಮಾನದಿಂದ ಕೆಳಗಿಳಿಯುವಂತೆ ಕೇಳಿಕೊಂಡಳು. ಇದಾದ ನಂತರ, ಆ ಮಹಿಳಾ ಪ್ರಯಾಣಿಕಳು ತನ್ನ ಸೀಟನ್ನು ಬಿಟ್ಟು ಹೊರಗೆ ಹೋಗಲು ಪ್ರಯತ್ನಿಸದಳು. ಜುಲೈ 2021ರಲ್ಲಿ ಈ ಘಟನೆ ನಡೆದಿದ್ದರೂ, ಆದರೆ ಇದೀಗ ಈ ವಿಷಯ ವೈರಲ್​​ ಆಗಿದೆ.

ಮಹಿಳೆಯ ಈ ಕೃತ್ಯ ಭದ್ರತಾ ದೃಷ್ಟಿಕೋನದಿಂದ ಅತ್ಯಂತ ಅಪಾಯಕಾರಿ ಮಾತ್ರವಲ್ಲದೆ, ನಿಯಮಗಳಿಗೆ ವಿರುದ್ಧವೂ ಆಗಿತ್ತು. ಸಿಬ್ಬಂದಿ ಅವನನ್ನು ತಡೆಯಲು ಪ್ರಯತ್ನಿಸಿದಾಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ಕೋಪದಿಂದ ಆ ಮಹಿಳೆ, ಹತ್ತಿರದಲ್ಲಿ ಕುಳಿತಿದ್ದ ಮತ್ತೊಬ್ಬ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿ ಕಚ್ಚಿದಳು. ಆ ನೋವಿಗೆ ಇನ್ನೊಬ್ಬ ಹಲ್ಲೆಗೊಳಗಾದ ಪ್ರಯಾಣಿಕ ಕಿರುಚಾಡಿದನು, ಆ ಸಮಯದಲ್ಲಿ ಇಡೀ ವಿಮಾನದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು.

ಕೊನೆಗೆ ಸಿಬ್ಬಂದಿ ಹೇಗೋ ಮಹಿಳೆಯನ್ನು ನಿಯಂತ್ರಿಸಿ ಹಿಂದಿನ ಸೀಟಿನಲ್ಲಿ ಕೂರಿಸಿದರು. ಇದಾದ ನಂತರ ಪೈಲಟ್ ಇಡೀ ಘಟನೆಯ ಬಗ್ಗೆ ಅಟ್ಲಾಂಟಾ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿ ಭದ್ರತಾ ಸಹಾಯವನ್ನು ಕೇಳಿದರು.

ಸುಮಾರು ಮೂರು ಗಂಟೆಗಳ ವಿಮಾನ ಪ್ರಯಾಣದ ನಂತರ, ವಿಮಾನವು ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಇಳಿಯಿತು ಮತ್ತು ಮಹಿಳೆಯನ್ನು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಅಧಿಕಾರಿಗಳ ಸಮ್ಮುಖದಲ್ಲಿ ಭದ್ರತಾ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಎಫ್‌ಎಎ ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ತನಿಖೆಯ ಸಮಯದಲ್ಲಿ, ಮಹಿಳೆಯ ನಡವಳಿಕೆಯನ್ನು ವಿಮಾನದ ಸುರಕ್ಷತೆಗೆ ಬೆದರಿಕೆ ಎಂದು ಪರಿಗಣಿಸಲಾಗಿದೆ.

ಈ ಪ್ರಕರಣದಲ್ಲಿ, ಮಹಿಳಾ ಪ್ರಯಾಣಿಕರಿಗೆ ಸುಮಾರು 64 ಲಕ್ಷ ರೂ. ಭಾರಿ ದಂಡ ವಿಧಿಸಿದೆ. ವಿಮಾನದಲ್ಲಿ ಅನುಚಿತ ವರ್ತನೆ, ಸಿಬ್ಬಂದಿಯ ಸೂಚನೆಗಳನ್ನು ಪಾಲಿಸದಿರುವುದು ಮತ್ತು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇದು ಅಮೆರಿಕದ ವಾಯುಯಾನ ಇತಿಹಾಸದಲ್ಲಿ ಪ್ರಯಾಣಿಕರೊಬ್ಬರಿಗೆ ವಿಧಿಸಲಾದ ಅತಿದೊಡ್ಡ ದಂಡಗಳಲ್ಲಿ ಒಂದಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net