Marriage | ತಂದೆಯೇ ದತ್ತು ಮಗಳನ್ನು ವಿವಾಹವಾಗಬಹುದು! ಸರ್ಕಾರದಿಂದಲೇ ಕಾನೂನು ಜಾರಿ

Marraige
Published on

Marriage | ತಂದೆಯೇ ದತ್ತು ಮಗಳನ್ನು ವಿವಾಹವಾಗಬಹುದು! ಸರ್ಕಾರದಿಂದಲೇ ಕಾನೂನು ಜಾರಿ

ಇರಾನ್‌: ಪ್ರಪಂಚದಲ್ಲಿ ಮದುವೆಗೆ ಸಂಬಂಧಿಸಿದಂತೆ ಒಂದೊಂದು ದೇಶದಲ್ಲಿಯೂ ಒಂದೊಂದು ರೀತಿಯ ಆಚರಣೆ, ಸಂಪ್ರದಾಯಗಳನ್ನು ನೋಡಬಹುದಾಗಿದೆ. ತಮ್ಮ ಸಂಸ್ಕೃತಿಗೆ ತಕ್ಕಂತೆ ಅನೇಕ ನಿಯಮಗಳನ್ನು ರೂಪಿಸಿರುತ್ತಾರೆ. ಆದರೆ ಇರಾನ್‌ನಲ್ಲಿ ಮದುವೆಯ ವಿಷಯವೇ ಬೇರೆ, 2013ರಲ್ಲಿ ಅಂದಿನ ಇರಾನ್ ಸರ್ಕಾರ ಒಂದು ಹೊಸ ಕಾನೂನನ್ನು ಜಾರಿಗೊಳಿಸಿದೆ. ಈ ಕಾನೂನಿನನ್ವಯ ತಂದೆ ತನ್ನ ದತ್ತು ಮಗಳನ್ನು ಮದುವೆಯಾಗಬಹುದಾಗಿದೆ.

ಪ್ರಪಂಚದ ವಿವಿಧ ದೇಶಗಳಲ್ಲಿ ವಿವಿಧ ರೀತಿಯ ಕಾನೂನುಗಳಿವೆ. ಈ ಕಾನೂನಿನ ವಿರುದ್ಧವಾಗಿ ನಡೆದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆಯೆ ಮದುವೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಈ ಕಾನೂನಿನಡಿ ಮಾಡಲಾಗಿದೆ.

ಇಂತಹ ಕಾನೂನಿನಲ್ಲಿ ಮುಖ್ಯವಾಗಿ ಮದುವೆಯ ವಯಸ್ಸು, ಯಾವ ವಯಸ್ಸಿನಲ್ಲಿ ಮದುವೆಯಾಗಬಹುದು ಎನ್ನುವ ನಿಯಮಗಳಿರುತ್ತದೆ. ಆದರೆ ಇರಾನ್​​​ ದೇಶದಲ್ಲಿ ಒಂದು ವಿಚಿತ್ರ ರೀತಿಯ ಕಾನೂನು ಇದೆ. ಅಲ್ಲಿ ತಂದೆ ತನ್ನ ದತ್ತು ಮಗಳನ್ನು ಮದುವೆಯಾಗಬಹುದು. ಈ ಕಾನೂನನ್ನು ಆ ದೇಶದ ಸರ್ಕಾರವೇ ಮಾಡಿದೆ.

ಇರಾನ್‌ನಲ್ಲಿ ತಂದೆ ತಾನು ದತ್ತು ಪಡೆದ ಮಗಳನ್ನು ಮದುವೆಯಾಗಬಹುದು:

ಮಗುವನ್ನು ಹೊಂದುವುದು ಯಾವುದೇ ಪೋಷಕರಿಗೆ ಬಹಳ ಸಂತಸದ ವಿಷಯ. ಆದರೆ ಕೆಲವರಿಗೆ ಈ ಭಾಗ್ಯ ಸಿಗುವುದಿಲ್ಲ. ಅಂತಹ ಪೋಷಕರು ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ. ದತ್ತು ಪಡೆದ ಮಕ್ಕಳಿಗೆ ಸ್ವಂತ ಮಕ್ಕಳಂತೆ ಪ್ರೀತಿಯನ್ನು ನೀಡುತ್ತಾರೆ. ಆದರೆ ಇರಾನ್‌ ದೇಶದಲ್ಲಿ ಈ ವಿಷಯವೇ ಬೇರೆ, ಇಲ್ಲಿ ತಂದೆ ದತ್ತು ಮಗಳನ್ನು ಮದುವೆಯಾಗಬಹುದು. ಈ ರೀತಿಯಾದಂತಹ ಕಾನೂನು ಜಗತ್ತಿನ ಬೇರೆ ಯಾವುದೇ ದೇಶದಲ್ಲಿಯೂ ಇಲ್ಲ.

ಇರಾನ್​ನಲ್ಲಿ ಮದುವೆಯ ವಯಸ್ಸಿಗೆ ಸಂಬಂಧಿಸಿದ ಕಾನೂನು: ಈ ದೇಶದಲ್ಲಿ 9-13 ವರ್ಷ ವಯಸ್ಸಿನ ಹುಡುಗಿಯರೂ ಮದುವೆಯಾಗಬಹುದು. ಹಾಗೆಯೇ ಹುಡುಗರು 15 ವರ್ಷ ವಯಸ್ಸಿನಲ್ಲಿ ಮದುವೆಯಾಗಬಹುದು

#iran #law #father #marrying #adopteddaughters

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net