ಅತ್ತ ನೇಣಿಗೆ ಶರಣಾದ ತಂದೆ, ಇತ್ತ ಸಾವಿನ ಸುದ್ದಿ ಕೇಳಿ ಕೆರೆಗೆ ಹಾರಿ ಪ್ರಾಣ ಬಿಟ್ಟ ಮಗ! ಕೊಡಗಲ್ಲಿ ಹೃದಯವಿದ್ರಾವಕ ಘಟನೆ

New Project(2)
Published on

ಕೊಡಗು: ಮಗ ಬೈದನೆಂದು ನೊಂದುಕೊಂಡ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವೀರಾಜಪೇಟೆ ಸಮೀಪದ ಬಿಳುಗುಂದ ಗ್ರಾಮದಲ್ಲಿ ಸಂಭವಿಸಿದೆ. ಅತ್ತ ತಂದೆಯ ಸಾವಿನ ಸುದ್ದಿ ಕೇಳಿ ಮಗನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಬ್ಬಯ್ಯ(75) ಮತ್ತು ಇವರ ಮಗ ಗಣಪತಿ(36) ಮೃತ ದುರ್ದೈವಿಗಳು. ಕ್ಷುಲ್ಲಕ ಕಾರಣಕ್ಕೆ ಅಪ್ಪ-ಮಗನ ನಡುವೆ ಜಗಳವಾಗಿತ್ತು. ಇದೇ ವಿಚಾರಕ್ಕೆ ಮನನೊಂದ ತಂದೆ ನೇಣಿಗೆ ಶರಣಾಗಿದ್ದಾರೆ. ತಂದೆ ಸಾವಿನ ಸುದ್ದಿ ಕೇಳಿ ಮಗ ಗಣಪತಿ ಕೆರೆಗೆ ಹಾರಿ‌ ಪ್ರಾಣಬಿಟ್ಟಿದ್ದಾನೆ.

ತಂದೆ-ಮಗನ ಸಾವಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net