

ಬೆಂಗಳೂರು: ಕಾರ್ಮಿಕರ ರಾಜ್ಯ ವಿಮಾ ನಿಗಮದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಲಬುರಗಿ ಇಎಸ್ಐ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಸಹಾಯಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಹುದ್ದೆ ವಿವರ
ಸಹಾಯಕ ಪ್ರಾಧ್ಯಾಪಕ- 9
ವಿಭಾಗವಾರು ವಿವರ: ಪ್ಯಾಥೋಲಜಿ-2, ಜನರಲ್ ಮೆಡಿಸನ್-1, ಡರ್ಮಟಾಲಜಿ-1, ಜನರಲ್ ಸರ್ಜರಿ-1, ರೇಡಿಯೋ ಡಯಗ್ನೋಸಿಸ್-2, ಎಮರ್ಜನ್ಸಿ ಮೆಡಿಸನ್- 1, ಫೋರೆನ್ಸಿಕ್ ಮೆಡಿಸನ್-1.
ಸಹ ಪ್ರಾಧ್ಯಾಪಕ- 14
ವಿಭಾಗವಾರು ವಿವರ: ಅಟಾನಮಿ-1, ಕಮ್ಯುನಿಟಿ ಮೆಡಿಸನ್-2, ಮೈಕ್ರೋಬಯಾಲಜಿ-1, ಜನರಲ್ ಮೆಡಿಸನ್-1, ಸೈಕಿಯಾಟ್ರಿ-1, ಪೀಡಿಯಾಟ್ರಿಕ್ಸ್-1, ಜನರಲ್ ಸರ್ಜರಿ-4, ರೇಡಿಯೋ ಡಯಗ್ನೋಸಿಸ್-2, ಎಮರ್ಜೆನ್ಸಿ ಮೆಡಿಸನ್-1.
ಸಹಾಯಕ ಪ್ರಾಧ್ಯಾಪಕರಲ್ಲಿ 7 ಸ್ಥಾನವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗೆ, 2 ಸ್ಥಾನವನ್ನು ಎಸ್ಟಿ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಸಹ ಪ್ರಾಧ್ಯಾಪಕರಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 10 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 3 ಸ್ಥಾನ ಮತ್ತು ಎಸ್ಟಿಗೆ 1 ಸ್ಥಾನ ಮೀಸಲು. ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈ ಅವಧಿಯಲ್ಲಿ ಅಭ್ಯರ್ಥಿಗಳು ಹೊರಗಡೆ ಬೇರೆ ಕೆಲಸ ಮಾಡಲು ಅವಕಾಶ ಇರುವುದಿಲ್ಲ.
ಅರ್ಹತಾ ಮಾನದಂಡ: ಎಂಸಿಐ/ ಎನ್ಎಂಸಿ ನಿಯಮಾನುಸಾರ ವಿದ್ಯಾರ್ಹತೆ ಕೇಳಲಾಗಿದ್ದು, ಗರಿಷ್ಠ 69 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ಸಹಾಯಕ ಪ್ರಾಧ್ಯಾಪಕರಿಗೆ ಮಾಸಿಕ 1,06,000 ರೂ. ಹಾಗೂ ಸಹ ಪ್ರಾಧ್ಯಾಪಕರಿಗೆ ಮಾಸಿಕ 92,000 ರೂ. ವೇತನ ಇದ್ದು, ಇತರ ಯಾವುದೇ ಭತ್ಯೆ ಇರುವುದಿಲ್ಲ.
ಸೂಚನೆ: ಅಧಿಸೂಚನೆ ಜತೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂದರ್ಶನದ ದಿನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ತಮ್ಮ ಮಾಸಿಕ ವೇತನ ಮೊತ್ತವನ್ನೇ ಸೇವಾ ಬಾಂಡ್ ಆಗಿ ಸಲ್ಲಿಸಬೇಕಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಸಂದರ್ಶನದಲ್ಲಿನ ಪಾಲ್ಗೊಳ್ಳುವಿಕೆ ಆಧರಿಸಿ ಆಯ್ಕೆ ಮಾಡಲಾಗುವುದು.
ಸಂದರ್ಶನ ನಡೆಯುವ ದಿನಾಂಕ: 29.4.2022 (ಬೆಳಗ್ಗೆ 9 ರಿಂದ 10.30ರ ಒಳಗೆ ನೋಂದಾಯಿತರಾಗಿರಬೇಕು)
ಸಂದರ್ಶನ ನಡೆಯುವ ಸ್ಥಳ: ಇಎಸ್ಐಸಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸೀಡಂ ರಸ್ತೆ, ಕಲಬುರಗಿ- 585 106
ಅಧಿಸೂಚನೆಗೆ: https://bit.ly/3KSKvFd
ಮಾಹಿತಿಗೆ: www.esic.nic.in