ತಡರಾತ್ರಿ ಗುಂಡು ಹಾರಿಸಿ ಒಂದೇ ಕುಟುಂಬದ ಮೂವರ ಹತ್ಯೆ! ಮಹಿಳೆ ಸ್ಥಿತಿ ಚಿಂತಾಜನಕ

up crime
Published on

ಲಕ್ನೋ: ಭಾನುವಾರ ತಡರಾತ್ರಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಮನೆಯಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ

ಬಟ್ಟೆ ವ್ಯಾಪಾರಿ ರಿಯಾಜ್ ಅಲಿಯಾಸ್ ರಿಯಾಜುದ್ದೀನ್ ಮನೆಗೆ ನುಗ್ಗಿದ ಅಪರಿಚಿತರ ಗುಂಪೊಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ. ದುಷ್ಕರ್ಮಿಗಳ ಗುಂಡೇಟಿಗೆ ರಿಯಾಜ್​, ಇವರ ಮಕ್ಕಳಾದ ಅಜ್ಜು ಮತ್ತು ಇಮ್ರಾನ್ ಬಲಿಯಾಗಿದ್ದಾರೆ. ರಿಯಾಜ್​ರ ಪತ್ನಿಗೂ ಗುಂಡೇಟು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿರಿ ಸಿಗಂದೂರು ಲಾಂಚ್​ನಿಂದ ನದಿಗೆ ಹಾರಿದ ಮಹಿಳೆ! ಸಾಯಲೆಂದೇ ಬಂದವಳ ಜೀವ ಉಳಿದಿದ್ದೇಗೆ?

ಇಂತಹ ದುರ್ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನ ಲೋನಿ ಪ್ರದೇಶದ ಟೋಲಿ ಕಾಲನಿಯಲ್ಲಿ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net