ಬೇಲೂರಿನಲ್ಲಿ ಬೆಳ್ಳಂಬೆಳಗ್ಗೆ ಒಂಟಿ ಸಲಗ ದಾಳಿ: ಇಬ್ಬರು ಕೂಲಿ ಕಾರ್ಮಿಕರ ಸಾವು

protest
Published on

ಹಾಸನ: ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದಲ್ಲಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ಕಾರ್ಮಿಕರಿಬ್ಬರು ಬಲಿಯಾಗಿದ್ದಾರೆ.

ಕಡೆಗರ್ಜೆ ಗ್ರಾಮದ ಚಿಕ್ಕಯ್ಯ(50) ಮತ್ತು ಹೀರಯ್ ಎಂಬುವರ ಪುತ್ರ ಚಿಕ್ಕಯ್ಯ(52) ಮೃತ ದುರ್ದೈವಿಗಳು. ಮೃತ ಇಬ್ಬರ ಹೆಸರೂ ಚಿಕ್ಕಯ್ಯ. ಕಡೆಗರ್ಜೆ ಮನೆ ಸಮೀಪದ ತೋಟದಲ್ಲಿ ಕೆಲಸಕ್ಕೆಂದು ಇವರಿಬ್ಬರು ಇಂದು(ಶುಕ್ರವಾರ) ಬೆಳಗ್ಗೆ ತೆರಳುತ್ತಿದ್ದರು. ಈ ವೇಳೆ ದಾಳಿ ಮಾಡಿದ ಒಂಟಿ ಸಲಗ, ಕೂಲಿ ಕಾರ್ಮಿಕರನ್ನು ತುಳಿದು ಸಾಯಿಸಿದೆ.

ಗುಂಪಿನಿಂದ ತಪ್ಪಿಸಿಕೊಂಡು ಬಂದು ಊರ ಸಮೀಪ ಬೀಡುಬಿಟ್ಟಿರುವ ಒಂಟಿ ಸಲಗ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಅಧಿಕಾರಿಗಳು ಸೂಕ್ತ ಕೈಗೊಂಡಿದ್ದರೆ ಕಾರ್ಮಿಕರಿಬ್ಬರ ಪ್ರಾಣ ಉಳಿಯುತ್ತಿತ್ತು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಮೇಲಧಿಕಾರಿಗಳು ಬರಬೇಕೆಂದು ಆಗ್ರಹಿಸಿ ಸ್ಥಳೀಯರು ರಸ್ತೆಯಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net