ಇ-ವಿಧಾನ್ ಅನುಷ್ಠಾನ ವಿಳಂಬ: ಕಾಗೇರಿ ಬೇಸರ

Kageri 1
Published on

ಬೆಂಗಳೂರು: ವಿಧಾನ ಮಂಡಲವನ್ನು ಕಾಗದ ರಹಿತವಾಗಿಸಲು ಉದ್ದೇಶಿತ ಇ-ವಿಧಾನ್ ಅನುಷ್ಠಾನ ರಾಜ್ಯದಲ್ಲಿ ವಿಳಂಬವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸ್ಪೀಕರ್ ಆಗಿ ಎರಡು ವರ್ಷಗಳ ಸಾಧನೆಯ ಪುಸ್ತಕ ಬಿಡುಗಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗೇರಿ, ಬೇರೆ ರಾಜ್ಯಗಳು ಈ ವಿಷಯದಲ್ಲಿ ಮುಂದಿವೆ. ಆದರೆ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದಲ್ಲಿ ಈ ಯೋಜನೆ 2014ರಿಂದಲೂ ತೆವಳುತ್ತಿದೆ ಎಂದರು.

ಹಣಕಾಸಿನ ಸ್ವಾಯತ್ತತೆ ಇಲ್ಲದಿರುವುದು, ಹೊಸತನಕ್ಕೆ ಅಧಿಕಾರಿಶಾಹಿ ಮನಸ್ಥಿತಿಯೇ ಮಂದಗತಿಗೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವಿಷಯದಲ್ಲಿ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.

kageri

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net