ವರದಕ್ಷಿಣೆ ಕಿರುಕುಳ: 3 ವರ್ಷದ ಮಗುವನ್ನು ಕೊಂದು ಗೃಹಿಣಿ ಆತ್ಮಹತ್ಯೆ

dowry
Published on

ಕೋಲಾರ: ವರದಕ್ಷಿಣೆ ಕಿರುಕುಳ ಸಹಿಸಲಾಗದೆ ಗೃಹಿಣಿಯೊಬ್ಬರು 3 ವರ್ಷದ ಮಗುವನ್ನು ನೀರಿನ ಸಂಪಿಗೆ ನೂಕಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂದ ಅಮಾನವೀಯ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಸಂಭವಿಸಿದೆ.

ಮುಳಬಾಗಿಲು ತಾಲೂಕಿನ ಪಿಚ್ಚಗುಂಟ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡತಮ್ಮನಹಳ್ಳಿ ಗ್ರಾಮದ ಚೈತ್ರಾ(25) ಮತ್ತು ಈಕೆಯ ಮಗು ಚಾರ್ವಿತ್​ ಗೌಡ ಮೃತರು. 3 ವರ್ಷದ ಹಿಂದೆ ಅಂದ್ರೆ 2018ರಲ್ಲಿ ಕೋಲಾರ ತಾಲೂಕಿನ ಪುರಹಳ್ಳಿ ಗ್ರಾಮದ ಶ್ರೀನಾಥ್​ ಎಂಬಾತನ ಜತೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಆಲಂಬಗಿರಿ ದೇವಾಲಯದಲ್ಲಿ ಚೈತ್ರಾಳ ಮದುವೆ ಮಾಡಿದ್ದರು.

ಮದುವೆ ಆದಾಗಿನಿಂದ ಗಂಡನ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರಂತೆ. ಇದೇ ವಿಚಾರವಾಗಿ 3 ಬಾರಿ ಪಂಚಾಯಿತಿ ನಡೆದಿತ್ತಾದರೂ ಅವರ ಕಿರುಕುಳ ನಿಂತಿರಲಿಲ್ಲ. ಚೈತ್ರಾಳ ಮಾವ-ಅತ್ತೆ, ನಾದಿನಿ, ಮೈದುನ ಸೇರಿ ಎಲ್ಲರೂ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದರು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಸಾವಿಗೂ ಮುನ್ನ ಚೈತ್ರಾ, ಡೆತ್​ನೋಟ್​ ಬರೆದಿಟ್ಟು ಸಾವಿಗೆ ಕಾರಣ ಯಾರೆಂದು ಬರೆದಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net