ಗುಂಡೇಟು ತಿಂದೂ ಕಾದಾಡಿದ ಶ್ವಾನ

Dog
Published on

ನಾಯಿಗಳು ಯಾವಾಗಲೂ ಚುರುಕುತನಕ್ಕೆ, ನಿಷ್ಠೆಗೆ, ಸಂವೇದನೆಗೆ ಹೆಸರಾದ ಪ್ರಾಣಿಗಳು. ತಮ್ಮ ಮಾಲೀಕರನ್ನು ರಕ್ಷಿಸಲು ಅವುಗಳು ಹೋರಾಡಿದ ನಿದರ್ಶನಗಳಿವೆ. ಜಾರ್ಜಿಯಾದ ಫುಲ್ಟನ್​ನ ನಾಯಿಯೊಂದು ಶಸ್ತ್ರ ಹೊಂದಿದ್ದ ಕಳ್ಳರೊಂದಿಗೆ ಕಾದಾಟ ನಡೆಸಿ, ತನ್ನ ಮನೆಯನ್ನು ಕಾಪಾಡಿದೆ.

ಸ್ಟಾರ್ಲಾ ಎಂಬ ಎರಡು ವರ್ಷದ ಈ ನಾಯಿಯಿದ್ದ ಮನೆಗೆ ಶಸ್ತ್ರಸಜ್ಜಿತ ಕಳ್ಳರು ಬಂದಿದ್ದರು. ಎರಡು ಬಾರಿ ಗುಂಡು ಹಾರಿಸಿದ್ದರಿಂದ ತನ್ನ ಕಾಲುಗಳಿಗೆ ಏಟಾದರೂ ಈ ನಾಯಿ ಅವರನ್ನು ಅಟ್ಟಿಸಿಕೊಂಡು ಹೋಗಿ ಮನೆಯಲ್ಲಿದ್ದ ಪುಟ್ಟ ಹುಡುಗಿಯ ಜೀವವನ್ನು ಕಾಪಾಡಿದೆ. ಕಳ್ಳರು ಬಾಗಿಲನ್ನು ಮುರಿದು ಮನೆಗೆ ನುಗ್ಗುತ್ತಿದ್ದಂತೆಯೇ ಸ್ಟಾರ್ಲಾ ಅವರ ಮೇಲೆ ಮುಗಿಬಿದ್ದ ದೃಶ್ಯಾವಳಿಗಳುು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net