

ಶಿವಮೊಗ್ಗ: ಗೋಪೂಗೆ ಇಟ್ಟಿದ್ದ ಬಂಗಾರದ ಸರವನ್ನು ಹಸುವೊಂದು ಪ್ರಸಾದದ ಜತೆ ನುಂಗಿದ್ದು, ಬಳಿಕ ಪಶುವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಬಂಗಾರದ ಸರವನ್ನು ಹೊರ ತೆಗೆದಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ನಡೆದಿದೆ.
ಗೋಪೂಜೆ ವೇಳೆ ಇಟ್ಟಿದ್ದ ಸರ ನಾಪತ್ತೆಯಾದಾಗ ಕುಟುಂಬಸ್ಥರು ಹುಡುಕಾಡಿದ್ದಾರೆ. ನಂತರ ಪ್ರಸಾದದ ಜತೆ ಬಂಗಾರದ ಸರವನ್ನು ಹಸು ನುಂಗಿದೆ ಎಂಬುದನ್ನು ಕುಟುಂಬಸ್ಥರು ಖಚಿತಪಡಿಸಿಕೊಂಡಿದ್ದಾರೆ. ಕುಟುಂಬಸ್ಥರು ಬಂಗಾರದ ಸರ ಹೋದರೆ ಹೋಗಲಿ, ನಮ್ಮ ಹಸು ಆರೋಗ್ಯವಾಗಿರಲಿ ಎಂದು ಸುಮ್ಮನಾಗಿದ್ದರು. ಸರ ನುಂಗಿದ್ದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು. ಮುಂದೆ ಅದು ಹಸುವಿನ ಪ್ರಾಣಕ್ಕೆ ಆತಂಕ ಎಲ್ಲರಿಗೂ ಎದರುರಾಗಿದೆ.
ನಂತರ ಪಶು ವೈದ್ಯ ಡಾ. ಆನಂದ್ ಅವರ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಹಸುವಿನ ದೇಹದಿಂದ ಸರ ಹೊರ ತೆಗೆದಿದ್ದಾರೆ. ಸದ್ಯ ಹಸು ಈಗ ಆರೋಗ್ಯವಾಗಿದೆ. ಚಿನ್ನದ ಸರ ಸಿಕ್ಕಿದೆ.ಇತ್ತ ಹಸು ಕೂಡಾ ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಆರ ಬಂಗಾರದ ಸರವನ್ನು ನುಂಗಿರುವುದು ತಡವಾಗಿ ಬೆಳಕಿಗೆ ಬಂದಿದೆ.