ಲೋಕಾ ಬಲೆಗೆ ಬಿದ್ದ ವೈದ್ಯಾಧಿಕಾರಿ

karnataka lokayukta
ಲೋಕಾಯುಕ್ತ ಕಚೇರಿ
Published on

ಬೆಂಗಳೂರು: ಬಿಲ್ ಪಾಸು ಮಾಡಿಕೊಡಲು ಲಂಚ ಪಡೆಯುತ್ತಿದ್ದ ಬಿಬಿಎಂಪಿಯ ವೈದ್ಯಾಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಬಿಎಂಪಿಯ ಗೋವಿಂದರಾಜನಗರ ವಾರ್ಡ್ ವ್ಯಾಪ್ತಿಯಲ್ಲಿ ಫಾಗಿಂಗ್ ಕೆಲಸ ಮಾಡಿದ್ದ ಗುತ್ತಿಗೆದಾರ ಬಾಲಾಜಿ, ಬಿಲ್ ಪಾಸು ಮಾಡಲು ಸಲ್ಲಿಸಿದ್ದರು. ಬಿಲ್ ಪಾಸು ಮಾಡಿಕೊಡಲು ವಾರ್ಡ್‌ನ ವೈದ್ಯಾಧಿಕಾರಿ ರಾಜೇಂದ್ರ (೫೯) ಅವರು ೩೦ ಸಾವಿರ ಲಂಚ ಕೇಳಿದ್ದರು. ಈ ಸಂಬಂಧ ಬಾಲಾಜಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಲೋಕಾಯುಕ್ತ ಪೊಲೀಸರು ಸೂಚಿಸಿದ್ದಂತೆ ಬಾಲಾಜಿ, ಶುಕ್ರವಾರ ರಾಜೇಂದ್ರ ಅವರಿಗೆ ಕಚೇರಿ ಬಳಿಯಲ್ಲೇ ಲಂಚದ ಹಣ ನೀಡಿದ್ದರು. ಇದೇ ವೇಳೆ ದಾಳಿ ನಡೆಸಿದ ಇನ್‌ಸ್ಪೆಕ್ಟರ್ ವಿಜಯ್‌ಕೃಷ್ಣ ನೇತೃತ್ವದ ತಂಡವು, ವೈದ್ಯಾಧಿಕಾರಿಯನ್ನು ಲಂಚದ ಸಮೇತ ಬಂಧಿಸಿತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net