ರಾಜ್ಯದಲ್ಲಿ ಡೆಂಘೆ ಜ್ವರಕ್ಕೆ ಮತ್ತೊಂದು ಮಗು ಬಲಿ

death
Published on

ರಾಯಚೂರು: ಕರೊನಾ, ನಿಫಾ ವೈರಸ್​ ಭೀತಿ ನಡುವೆ ಡೆಂಘೆ ಜ್ವರ ರಾಜ್ಯದಲ್ಲಿ ಮರಣ ಮೃದಂಗ ಭಾರಿಸುತ್ತಿದೆ. ಕಳೆದ ವಾರ ಮೈಸೂರಿನಲ್ಲಿ 9 ವರ್ಷದ ಬಾಲಕಿ ಡೆಂಘೆಗೆ ಬಲಿಯಾದ ಪ್ರಕರಣ ಮಾಸುವ ಮುನ್ನವೇ ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಮಗುವಿನ ಜೀವ ಇದೇ ಜ್ವರಕ್ಕೆ ಬಲಿಯಾಗಿದೆ.

ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಸೈಯದ್ ಎಂಬುವರ ಪುತ್ರಿ ಉಮ್ಮೆ ಕುಲ್ಸುಮ್(5) ಮೃತ ಬಾಲಕಿ. ಡೆಂಘೆ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಹೈದರಾಬಾದ್​ನ ಖಾಸಗಿಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net