ದೆಹಲಿಯ ಕರ್ನಾಟಕ ಭವನದ ಕಾರು ಚಾಲಕ ಆತ್ಮಹತ್ಯೆ! ಮಂಡ್ಯ ಮೂಲದ ಯುವಕನ ಸಾವಿಗೆ ಕಾರಣ?

New Project(8)
Published on

ದೆಹಲಿ: ಮಾಜಿ ಪ್ರಧಾನಿ ದೇವೇಗೌಡರ ನಿವಾಸದ ಕೆಲಸಗಾರರ ಕ್ವಾಟ್ರಸ್​ನಲ್ಲಿ ದೆಹಲಿಯ ಕರ್ನಾಟಕ ಭವನದ ಕಾರು ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ಯುವಕ ಎಚ್​.ಟಿ. ಅಮಿತ್(23) ಮೃತ ದುರ್ದೈವಿ. ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಮಿತ್, ದೇವೇಗೌಡರ ನಿವಾಸದ ಕೆಲಸಗಾರರ ಕ್ವಾಟ್ರಸ್​ನಲ್ಲಿ ತಂಗಿದ್ದ.

ಗುರುವಾರ ರಾತ್ರಿ ಕೋಣೆಯಲ್ಲೇ ನೇಣುಬಿಗಿದುಕೊಂಡು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಆರ್​ಎಂಎಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net