More

    ಬೆಳಗಾವಿಯಲ್ಲಿ ಭದ್ರತಾ ಪಡೆಯ ಎಕೆ-47 ರೈಫಲ್​ಗಳು ಕಳವು

    ಬೆಳಗಾವಿ: ನೆರೆಯ ಮಹಾರಾಷ್ಟ್ರ ಬಳಿ ಸಮುದ್ರದಲ್ಲಿ ಎಕೆ-47 ರೈಫಲ್​ಗಳ ಸಮೇತ ಬೋಟ್ ‌ಪತ್ತೆಯಾಗಿರುವ ಬೆನ್ನಲ್ಲೇ ಬೆಳಗಾವಿ ಇಂಡೋ ಟಿಬೆಟ್‌ ಗಡಿ ಪೋಲಿಸ್​ (ಐಟಿಬಿಪಿ) ತರಬೇತಿ ಕ್ಯಾಂಪಸ್ ಪ್ರದೇಶದಲ್ಲಿ ಎರಡು ಎಕೆ-47 ರೈಫಲ್​ಗಳು ಕಳ್ಳತನವಾಗಿದ್ದು, ಆತಂಕ ಮೂಡಿಸಿದೆ.

    ಬೆಳಗಾವಿ ತಾಲೂಕಿನ ಹಾಲಭಾವಿಯಲ್ಲಿರುವ ಐಟಿಬಿಪಿ ಕ್ಯಾಂಪಿನಲ್ಲಿ ಮಧುರೈನ 45ನೇ ಬೆಟಾಲಿಯನ್‌ ಪೊಲೀಸ್‌ ಪಡೆಯ ರಾಜೇಶಕುಮಾರ, ಸಂದೀಪ ಮೀನಾ ಅವರು ನಕ್ಸಲ್ ನಿಗ್ರಹ ದಳದ ತರಬೇತಿ ಪಡೆಯುತ್ತಿದ್ದರು. ಇವರಿಗೆ ಸೇರಿದ ಎರಡು ಎಕೆ-47 ರೈಫಲ್ ಕಳವಾಗಿವೆ.

    ರೈಫಲ್​ಗಳ ಪತ್ತೆಗಾಗಿ ಕ್ಯಾಂಪಸ್​ನಲ್ಲಿ ಎಲ್ಲ ಕಡೆ ಹುಡಕಲಾಗಿದೆ. ಸಿಸಿ ಟಿವಿಗಳನ್ನು ಪರಿಶೀಲಿಸಿದ್ದಾರೆ. ಆದರೂ, ರೈಫಲ್​ಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆ ಸಮೀಪದ ಕಾಕತಿ ಪೊಲೀಸ್ ಠಾಣೆಯಲ್ಲಿ ಎಕೆ-47 ರೈಫಲ್​ ಕಳ್ಳತನದ ಬಗ್ಗೆ ದೂರು ದಾಖಲಾಗಿದೆ.

    ಬೆಳಗಾವಿ ತಾಲೂಕಿನ ಹಾಲಭಾವಿಯಲ್ಲಿರುವ ಐಟಿಬಿಪಿಯಲ್ಲಿ ಎಕೆ-47 ಕಳ್ಳತವಾಗಿರುವ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಗುರುವಾರ ಐಟಿಬಿಪಿ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಸೂಕ್ಷ್ಮ ವಿಷಯವಾಗಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
    |ಪಿ.ವಿ.ಸ್ನೇಹಾ ಡಿಸಿಪಿ

    ಮಿನಿಷ್ಟ್ರು ಬಂದ್ರೂ ಮೇಷ್ಟ್ರು ಬರಲಿಲ್ಲ! ಬಿ.ಸಿ.ನಾಗೇಶ್ ಎದುರೇ ಅವ್ಯವಸ್ಥೆ ಬಯಲು, ಶಿಕ್ಷಕರಿಗೆ ನೋಟಿಸ್ ಜಾರಿ

    PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts