More

    PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

    ಬೆಂಗಳೂರು: ಕರ್ನಾಟಕ ಪೊಲೀಸ್​ ಇಲಾಖೆಗೆ ಸೇರಬೇಕು, ಖಾಕಿ ಡ್ರಸ್​ ಧರಿಸಬೇಕು ಎಂದು ಮಹತ್ತರವಾದ ಕನಸು ಕಂಡಿದ್ದ ಇಂಜಿನಿಯರಿಂಗ್​ ಪದವೀಧರನೊಬ್ಬ, ಕಳ್ಳನಾದ ಸ್ಟೋರಿ ಇದು. ಅಷ್ಟೇ ಅಲ್ಲ, ನಕಲಿ ಪೊಲೀಸ್​ ಆಗಿ ಹಣ ವಸೂಲಿ ಮಾಡುತ್ತಾ ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪಿಎಸ್​ಐ ಆಗಬೇಕು ಅಂದುಕೊಂಡಿದ್ದವ ದಾರಿ ತಪ್ಪಿದ ತಪ್ಪಿದ ಕಂಬಿ ಎಣಿಸುವಂತಾಗಿದೆ.

    24 ವರ್ಷದ ವಿನಯ್ ಕುಮಾರ್ ಬಂಧಿತ ಆರೋಪಿ. ಮೂಡಲಪಾಳ್ಯ ನಿವಾಸಿಯಾದ ಈತ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರ್ ಪದವೀಧರ. ಓದಿನಲ್ಲಿ ಮುಂದಿದ್ದ ಈತ, ಟಾಪರ್​ ಆಗಿದ್ದ. ಅಂದುಕೊಂಡಂತೆ ಪೊಲೀಸ್ ಇಲಾಖೆಗೆ ಸೇರಲು ಆಗಲಿಲ್ಲ ಕಳ್ಳತನಕ್ಕಿಳಿದ ಈತ, ಮೊದಲಿಗೆ ಚಂದ್ರಲೇಔಟ್​ನಲ್ಲಿ ಬೈಕ್ ಕಳವು ಮಾಡಿದ್ದ.

    ನಂತರ ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಹೆಲ್ಮೆಟ್ ಧರಿಸಿ ವಾಹನಗಳನ್ನು ನಿಲ್ಲಿಸಿ ಸುಲಿಗೆ ಮಾಡುತ್ತಿದ್ದ. ಆರ್​ಎಂಸಿ ಯಾರ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಕೋಮುಗಲಭೆಯಲ್ಲ, ಜೂಜಿನ ವೇಳೆ ನಡೆದ ಗಲಾಟೆ: ವಿಡಿಯೋ ಸಹಿತ BJPಗೆ ಭದ್ರಾವತಿ ಶಾಸಕ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts