

ಕನಕಪುರ: ಆರ್ಟ್ ಆಫ್ ಲಿವಿಂಗ್ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈಶ್ವರ್ (55) ಮೃತ ದುರ್ದೈವಿ. ಸಾವಿಗೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಈಶ್ವರ್, ತನ್ನ ಪತ್ನಿ ಸೇರಿ 12 ಮಂದಿ ಹೆಸರನ್ನ ಡೆತ್ನೋಟಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಸಾವಿಗೆ ಪತ್ನಿಯೇ ಪ್ರಮುಖ ಕಾರಣ, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ, ಮಗಳು ಕೂಡ ನನ್ನನ್ನು ಅಪ್ಪ ಎಂದು ಕರೆಯುತ್ತಿರಲಿಲ್ಲ... ಎಂದು ಬರೆದಿದ್ದಾರೆ.
ಮೃತನ ಸಹೋದರ ಕಗ್ಗಲಿಪುರ ಠಾಣೆಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಡೆತ್ನೋಟ್ನಲ್ಲಿ ತನ್ನ ಪತ್ನಿ, ಸಂಬಂಧಿಕರು, ಸ್ನೇಹಿತರು ಹಾಗೂ ಜಯನಗರ ಎಸಿಪಿ ಸೇರಿ ಒಟ್ಟು 12 ಮಂದಿಯ ಹೆಸರುಗಳನ್ನು ಈಶ್ವರ್ ಉಲ್ಲೇಖಿಸಿದ್ದಾರೆ. ತನ್ನ ಸಾವಿಗೆ ಪತ್ನಿಯೇ ಪ್ರಮುಖ ಕಾರಣ, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ, ಮಗಳು ಕೂಡ ಅಪ್ಪ ಎಂದು ಕರೆಯುತ್ತಿರಲಿಲ್ಲ, ಸಂಬಂಧಿಕರು ಸರಿ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿಂದೆ ಪತ್ನಿಯೇ ನನ್ನ ವಿರುದ್ಧ ದೂರು ದಾಖಲಿಸಿದ್ದಾಗ ಎಸಿಪಿ ಸರಿಯಾಗಿ ವಿಚಾರಣೆ ಮಾಡದೆ ಠಾಣೆಗೆ ಕರೆಸಿದ್ದರು. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ.