ಒಂಟಿಯಾಗಿದ್ದ, ಮಹಿಳೆ ಬಾಯಿಗೆ ಬಟ್ಟೆ ತುರುಕಿದ! ಅಡುಗೆ ಕೋಣೆಯಲ್ಲಿ ಶವ ಪತ್ತೆ…

shivmogga crime
Published on

ಶಿವಮೊಗ್ಗ: ನಗರದ ವಿಜಯನಗರದಲ್ಲಿ ನೀರಾವರಿ‌ ಇಲಾಖೆಯ ಇಂಜಿನಿಯರ್ ಪತ್ನಿಯ ಬಾಯಿಗೆ ಬಟ್ಟೆ ತುಂಬಿ ಕೊಲೆ ಮಾಡಲಾಗಿದೆ.

ವಿಜಯನಗರದ ಕಮಲಮ್ಮ(54) ಕೊಲೆಯಾದ ಮಹಿಳೆ. ಮನೆಯಲ್ಲಿ ಒಬ್ಬರೇ ಇದ್ದಾಗ ಕೊಲೆ ಮಾಡಲಾಗಿದೆ. ಕಮಲಮ್ಮ ಅವರ ಪತಿ ಚಿತ್ರದುರ್ಗದಲ್ಲಿ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಪುತ್ರ ಬೆಂಗಳೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.

ಕಮ್ಮಲಮ್ಮ ಒಬ್ಬರೇ ಮನೆಯಲ್ಲಿ ಇದ್ದರು. ಶನಿವಾರ ಸಂಜೆಯೇ ಕೊಲೆ ನಡೆದಿರುವ ಸಾಧ್ಯತೆ ಇದೆ. ರಾತ್ರಿ ಪತಿ ಮತ್ತು ಪುತ್ರ ಇಬ್ಬರೂ ಕಮಲಮ್ಮ ಅವರಿಗೆ ಪೋನ್ ಮಾಡಿದ್ದರೂ ಕರೆ ಸ್ವೀಕರಿಸಿರಲಿಲ್ಲ.

ಪರಿಚಯಸ್ಥರು ಮತ್ತು ನೆರೆಹೊರೆಯವರಿಗೆ ಕರೆ ಮಾಡಿ ಮನೆಯ ಬಳಿ ನೋಡಿಕೊಂಡು ಬರಲು ತಿಳಿಸಿದ್ದಾರೆ. ಮನೆ ಬಲ್ಬ್ ಗಳನ್ನೂ ಆನ್ ಮಾಡಿರಲಿಲ್ಲ. ಅನುಮಾನಗೊಂಡು ಮನೆ ಬಾಗಿಲು ತೆರದು ನೋಡಿದಾಗ ಅಡುಗೆ ಕೋಣೆಯಲ್ಲಿ ಕಮಲಮ್ಮ ಅವರ ಮೃತದೇಹ ಪತ್ತೆಯಾಗಿದೆ. ಬಾಯಿಗೆ ಬಟ್ಟೆ ತುರುಕಿದ್ದು ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net