ರಶ್ಮಿಕಾ ಮಂದಣ್ಣಗೆ ವಂಚನೆ; ಲಕ್ಷ ಲಕ್ಷ ಹಣ ಗುಳುಂ ಮಾಡಿದ ಮ್ಯಾನೇಜರ್!

rashmika mandanna
Published on

ಬೆಂಗಳೂರು: ಸ್ಯಾಂಡಲ್​ವುಡ್​​ನಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ಬೇಡಿಕೆ ಹೊಂದಿರುವ ನಟಿ ರಶ್ಮಿಕಾ ಮಂದಣ್ಣ. ಕೊಡಗಿನ ಕುವರಿಗೆ ನಂಬಿಕಸ್ಥ ವ್ಯಕ್ತಿಯಿಂದ ಹಣದ ವಿಚಾರವಾಗಿ ಮೋಸವಾಗಿದೆ ಎಂದು ತಿಳಿದು ಬಂದಿದೆ.

ನಟಿಗೆ ಮ್ಯಾನೇಜರ್ ಮೋಸ ಮಾಡಿದ್ದಾರಂತೆ. ರಶ್ಮಿಕಾ ಮಂದಣ್ಣ ಮ್ಯಾನೇಜರ್ ನಿಂದ 80 ಲಕ್ಷಕ್ಕೂ ಹೆಚ್ಚು ಹಣ ವಂಚನೆಯಾಗಿದೆ. ಆದ್ದರಿಂದ ನಟಿ ರಶ್ಮಿಕಾ ಮಂದಣ್ಣ, ತನ್ನ ಮ್ಯಾನೇಜರ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರಂತೆ. ಮ್ಯಾನೇಜರ್ ಮೋಸ ಮಾಡಿದ ಬಳಿಕ ಆ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಲ್ಲ. ಆದರೆ ಈ ಸುದ್ದಿ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಗಾಳಿಸುದ್ದಿಯೊಂದು ಹರಿದಾಡುತ್ತಿದೆ.

ಸ್ಯಾಂಡಲ್​ವುಡ್​, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಸಿನಿಮಾ ಮಾಡಿ ಸ್ಟಾರ್ ನಟಿಯಾಗಿರುವ ರಶ್ಮಿಕಾ ಮಂದಣ್ಣಗೆ ಅಪಾರ ಅಭಿಮಾನಿ ಬಳಗವಿದೆ. ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net