

ದೆಹಲಿ: ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ನ ಅಟ್ಟಹಾಸ ಹೆಚ್ಚುತ್ತಿರುವಾಗಲೇ ಯೆಲ್ಲೋ ಫಂಗಸ್ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿದೆ. ಇದೀಗ ಕ್ರೀಮ್ ಬಣ್ಣದ ಫಂಗಸ್ ಪತ್ತೆಯಾಗಿದ್ದು, ಮತ್ತಷ್ಟು ಭೀತಿ ಹುಟ್ಟಿಸಿದೆ.
ದೆಹಲಿಯ ಗಂಗರಾಮ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಯಲ್ಲಿ ಕ್ರೀಮ್(Cream Fungus) ಬಣ್ಣದ ಫಂಗಸ್ ಪತ್ತೆಯಾಗಿದೆ. ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಯೊಬ್ಬರು ತಿಂಗಳ ಹಿಂದೆ ಕಿಮೋಥೆರಪಿಗೆ ಒಳಗಾಗಿದ್ದರು. ಆಕೆಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಸಣ್ಣ ಕರುಳು, ದೊಡ್ಡ ಕರುಳು ಮತ್ತು ಅನ್ನನಾಳದಲ್ಲಿ ಕ್ರೀಮ್ ಫಂಗಸ್ ಕಂಡುಬಂದಿದೆ.