ಮಳೆಗೆ ಬೆಳೆ ನಾಶ: ಮನನೊಂದ ರೈತ ಆತ್ಮಹತ್ಯೆ

New Project
Published on

ಕಾರವಾರ: ನಿರಂತರ ಮಳೆಯಿಂದಾಗಿ ಫಸಲು ನಷ್ಟವಾಗಿದ್ದರಿಂದ ಮನನೊಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನರೂರಿನ ರೈತ ಗಂಗಾಧರ ಶೇಷಣ್ಣನವರ (58) ಮೃತರು. ಇವರು ಸಾಲ ಮಾಡಿ ಭತ್ತ, ಶುಂಠಿ ಕೃಷಿ ಮಾಡಿದ್ದರು. ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಬೆಳೆನಾಶವಾಗಿದ್ದು, ಈ ನೋವನ್ನು ಸಹಿಸಲಾಗದೆ ಗಂಗಾಧರ ಶೇಷಣ್ಣನವರ ನ.17ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಶಿರಸಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net