

ಉತ್ತರಪ್ರದೇಶ: ಕುಡಿದ ಮತ್ತಲ್ಲಿದ್ದ ವ್ಯಕ್ತಿಯೊಬ್ಬ ಸೇವಿಸುವ ಆಹಾರದಲ್ಲಿ ಅಮಲಿನ ವಿಷ ಹಾಕಿದ ಬಳಿಕ ತಾಯಿ ಜೊತೆ ನಾಲ್ವರು ಸಹೋದರಿಯರನ್ನು ಕೊಂದಿರುವ ಘಟನೆ(Tragedy) ಲಕ್ನೋದ ಹೋಟೆಲ್ನಲ್ಲಿ ಮಂಗಳವಾರ ನಡೆಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ರಾ ಮೂಲದ 24 ವರ್ಷದ ಹರ್ಷದ್ ಎಂಬಾತ ಬಂಧಿತ ವ್ಯಕ್ತಿ, ಊಟ ಮಾಡಿಕೊಂಡು(ಅಮಲಿನಲ್ಲಿ) ಬೆಡ್ ಮೇಲೆ ಮಲಗಿಕೊಂಡಿದ್ದ ಕುಟುಂಬಸ್ಥರಲ್ಲಿ ತಾಯಿಯನ್ನು ಕತ್ತು ಹಿಸುಕಿ ಮತ್ತು ಸಹೋದರಿಯರನ್ನು ಬ್ಲೆಡ್ನಿಂದ ಕತ್ತು ಕೊಯ್ದು ಕೊಂದಿದ್ದಾರೆ. ಹೋಟೆಲ್ ಬೆಡ್ ಮೇಲೆ ಎಲ್ಲರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಗ್ಗೆ ಗೊತ್ತಾಗಿದೆ. ಅಲ್ಲದೆ, ಮೃತ ದೇಹಗಳ ಜತೆ ಹರ್ಷದ್ ಕೂಡ ಅಲ್ಲೆ ಇದ್ದನು. ಕೃತ್ಯ ಎಸೆಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವರ್ಷದ ಹಿನ್ನೆಲೆ ಇದೇ ಡಿ.30ರಂದು ಅಗ್ರಾ ಮೂಲದ ಕುಟುಂಬ ಲಕ್ನೋ ನಗರಕ್ಕೆ ಬಂದಿದ್ದು, ಹೋಟೆಲ್ವೊಂದರಲ್ಲಿ ಉಳಿದುಕೊಂಡಿದ್ದರು. ಮೃತರನ್ನು ಹರ್ಷದ್ ತಾಯಿ ಅಸ್ಮಾ ಮತ್ತು ಕ್ರಮವಾಗಿ 9,16,18 ಮತ್ತು 19 ವರ್ಷದ ಸಹೋದರಿಯರು ಎಂದು ಗುರುತಿಸಲಾಗಿದೆ. ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ, ಯಾವ ಕಾರಣಕ್ಕಾಗಿ ಕೊಂದಿದ್ದಾನೆ ಎದು ಆರೋಪಿ ತಿಳಿಸಿಲ್ಲ. ವರದಿಯ ಬಳಿಕ ಹೆಚ್ಚಿನ ತನಿಖೆ ಮಾಡಲಾವುದು ಎಂದು ಅಧಿಕಾರಿಗಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ಮಾತ್ರವಲ್ಲದೆ ಆರೋಪಿಯ ತಂದೆ ಕೂಡ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ಇತ ತಲೆ ಮರಿಸಿಕೊಂಡಿದ್ದಾರೆ. ಅತನಿಗಾಗಿ ಪತ್ತೆಗಾಗಿ ತಂಡ ನೇಮಿಸಿದ್ದು, ಪ್ರಕ್ರಿಯೇ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)