ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್​ ಆದೇಶ: ರೈತನಿಗೆ ಪರಿಹಾರ ಕೊಡದೆ ಸತಾಯಿಸುತ್ತಿದ್ದ ಡಿಸಿಗೆ ಶಾಕ್

kalburgi dc
Published on

ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಕಾರು ಜಪ್ತಿ ಮಾಡುವಂತೆ ಕೋರ್ಟ್​ ಆದೇಶಿಸಿದೆ.

ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಧಿಕಾರಿಯ ಸರ್ಕಾರಿ ಕಾರನ್ನು ಜಪ್ತಿ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಬಂದ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು, ಕಾರಿನ ಮೇಲೆ ನೋಟಿಸ್​ ಅಂಟಿಸಿದರು.

ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆ ಅವರಿಗೆ ಪರಿಹಾರ ನೀಡದೆ ವಿಳಂಬ ಮಾಡಿದ್ದ ಜಿಲ್ಲಾಧಿಕಾರಿಗೆ ಕೋರ್ಟ್​ ಬಿಸಿ ಮುಟ್ಟಿಸಿದೆ.

ರೈತ ಕಲ್ಲಪ್ಪ ಮೇತ್ರೆ ಅವರ 33 ಗುಂಟೆ ಜಮೀನು 2008ರಲ್ಲಿ ಭೀಮಾ‌ ಏತನಿರಾವರಿ ಯೋಜನೆಯಡಿ ಮುಳುಗಡೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ 7,39,632 ರೂಪಾಯಿ ಪರಿಹಾರ ನೀಡವಂತೆ ಕೋರ್ಟ್ ಆದೇಶಿಸಿತ್ತು. ಆದರೂ ಪರಿಹಾರ ನೀಡದೆ ಜಿಲ್ಲಾಡಳಿತ ಸತಾಯಿಸಿತ್ತು. ಈ ಸಂಬಂಧ ಗರಂ ಆದ ಕೋರ್ಟ್, ಡಿಸಿ ಕಾರನ್ನೇ ಜ್ಪತಿ ಮಾಡುವಂತೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net