VIDEO | 295 ಅಡಿ ಎತ್ತರದಲ್ಲಿ ನೇತಾಡುವ ಟೇಬಲ್ ಮೇಲೆ ಕುಳಿತು ಡಿನ್ನರ್ ಮಾಡಿದ ಜೋಡಿ!

viral video
Published on

ನವದೆಹಲಿ: ಪ್ರತಿಯೊಬ್ಬ ಮನುಷ್ಯನಿಗೂ ಭಯವಿದೆ. ಪ್ರತಿಯೊಬ್ಬರ ಭಯವು ವಿಭಿನ್ನ ಕಾರಣಗಳನ್ನು ಹೊಂದಿರಬಹುದು. ಕೆಲವರು ಕತ್ತಲೆಗೆ ಹೆದರುತ್ತಾರೆ. ಆದರೆ ಇಲ್ಲೊಂದು ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ದಂಪತಿ 295 ಅಡಿಗಳಷ್ಟು ಎತ್ರದಲ್ಲಿರುವ ಗಾಳಿಯಲ್ಲಿ ತೂಗಾಡುತ್ತಿರುವ ಟೇಬಲ್ ಮೇಲೆ ಕುಳಿತು ಡಿನ್ನರ್ ಮಾಡುತ್ತಿರುವುದನ್ನು ಕಾಣಬಹುದು. ಕೆಳಗೆ ಜಲಪಾತವೊಂದು ಹರಿಯುತ್ತಿದೆ. ಇಬ್ಬರೂ ಮೇಜಿನ ಮೇಲೆ ಊಟವನ್ನು ಸವಿಯುತ್ತಿದ್ದಾರೆ. ಮೇಜಿನ ಮೇಲೆ ಕೆಲವು ತಿಂಡಿಗಳು ಮತ್ತು ಗಾಜಿನ ಕೆಂಪು ವೈನ್ ಕಂಡುಬರುತ್ತದೆ. ಸುರಕ್ಷತೆಗಾಗಿ ಇಬ್ಬರಿಗೂ ಹಗ್ಗದಿಂದ ಕಟ್ಟಲಾಗಿದೆ. ಇನ್​ಸ್ಟಾಗ್ರಾಮ್​​ ಖಾತೆಯೊಂದರಲ್ಲಿ ಇದು ಮುಂದಿನ ಹಂತ .. ನೀವೂ ಇದನ್ನು ಪ್ರಯತ್ನಿಸಲು ಬಯಸುವಿರಾ? ಎನ್ನುವ ಶೀರ್ಷಿಕೆಯಲ್ಲಿ ವಿಡಿಯೋವನ್ನು ಇನ್​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್ ಮಾಡಲಾಗಿದೆ.

ಆಗಸ್ಟ್ 20 ರಂದು ಶೇರ್ ಆಗಿರುವ ಈ ವಿಡಿಯೋ ಕ್ಲಿಪ್ ಬ್ರೆಜಿಲ್​ನ ದೃಶ್ಯಗಳು ಎನ್ನಲಾಗಿದೆ. ಈ ಸಾಹಸವನ್ನು ಉಚಿತವಾಗಿ ಮಾಡಲು ಅವಕಾಶ ಕೊಟ್ಟರು ಮಾಡಬಾರದು. ಅಂತಹ ಸ್ಥಳಕ್ಕೆ ಭೇಟಿ ನೀಡುವುದು ಅಪಾಯಕಾರಿ ಎಂದು ಎಂದು ಹಲವರು ಕಾಮೆಂಟ್​​ ಮಾಡಿದ್ದಾರೆ.

ಕೇಬಲ್ ತಂತಿಗಳ ಸಹಾಯದಿಂದ ಕಟ್ಟಿ ಹಾಕಿದ್ದಾರೆ. ಇದು ಕೇಬಲ್ ಕಾರ್ ತರಹದ ಅನುಭವ. ಇಲ್ಲಿ 15 ನಿಮಿಷಗಳ ಕಾಲ ಕುಳಿತು ವಿಶೇಷ ಅನುಭವವನ್ನು ಪಡೆಯಲು ನೀವು 37 ಸಾವಿರ ರೂಪಾಯಿಗಳಷ್ಟು ಖರ್ಚು ಮಾಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net