ಜುಲೈನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಕರೊನಾ ಲಸಿಕೆ

coronavaccine
Published on

ಬೆಂಗಳೂರು: ಕಾಲೇಜು ಪುನರಾರಂಭಿಸುವ ಉದ್ದೇಶದಿಂದ ಜುಲೈ ಆರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಲಸಿಕೆ ಕೊಡುವ ಉದ್ದೇಶವಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ದೇವಿಶೆಟ್ಟಿಯವರ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿಯ ಅನುಸಾರ ಕಾಲೇಜು ಪುನರಾರಂಭಿಸುವ ಬಗ್ಗೆ ಲಸಿಕೆ ನೀಡಿದ ನಂತರ ತೀರ್ಮಾನ ಮಾಡುತ್ತೇವೆ ಎಂದರು‌.

ಸೋಂಕು ಹರಡಿದಷ್ಟು ರೂಪಾಂತರಗೊಳ್ಳುತ್ತದೆ, ಇದನ್ನು ತಡೆಯಲು ಲಸಿಕೆ ರಾಮಬಾಣ. ಜುಲೈನಲ್ಲಿ‌ ಕೇಂದ್ರದಿಂದ ಮತ್ತಷ್ಟು ಸ್ಟಾಕ್ ಬರಲಿದೆ. ಈ ವೇಳೆ ಕಾಲೇಜು ವಿದ್ಯಾರ್ಥಿಗಳನ್ನು ಆದ್ಯತಾ ಪಟ್ಟಿಗೆ ಸೇರಿಸಿಕೊಳ್ಳುವ ತೀರ್ಮಾನ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net