ಕರೊನಾ ಸಂಕಷ್ಟ: ಸಿಎಂ‌ ನೇತೃತ್ವದಲ್ಲಿ ಮಹತ್ವದ ಸಭೆ

bsy meeting
Published on

ಬೆಂಗಳೂರು: ಕೋವಿಡ್ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ‌ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ.

ಹಿರಿಯ ಸಚಿವರು, ಮುಖ್ಯಕಾರ್ಯದರ್ಶಿ, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಗುರುವಾರ ಬೆಳಗ್ಗೆ ಚರ್ಚೆ ನಡೆಸಿದ ಸಿಎಂ, ಸದ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಬೆಡ್, ಆಕ್ಸಿಜನ್, ಔಷಧ ವ್ಯವಸ್ಥೆ, ಮುಂದೆ ಎದುರಾಗುವ ಸವಾಲು, ಸರ್ಕಾರ ಕೈಗೊಳ್ಳಬೇಕಾದ ತೀರ್ಮಾನದ ಬಗ್ಗೆ ಸಿಎಂ ಚರ್ಚೆ ನಡೆಸಿದರು.

ಎಲ್ಲ ಗೊಂದಲಗಳೂ ಶೀಘ್ರವೇ ನಿವಾರಣೆಯಾಗಲಿದೆ. ಔಷಧ ಹಂಚಿಕೆ, ಆಕ್ಸಿಜನ್ ವಿತರಣೆ ಸರಿಪಡಿಸಲಾಗುತ್ತಿದೆ. ‌ಕೋವಿಡ್ ಕೇರ್ ಸೆಂಟರ್ ಆರಂಭಿಸುತ್ತಿದ್ದು, ಬೆಡ್ ಕೊರತೆ ನೀಗಲಿದೆ ಎಂದು ಅಧಿಕಾರಿಗಳು ಸಿಎಂ‌ ಗಮನಕ್ಕೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net