

ರಾಮನಗರ: ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ನ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ಗೆ ಕರೊನಾ ಸೋಂಕು ದೃಢಪಟ್ಟಿದೆ.
ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ ಡ್ಯೂಟಿಗೆ ಬಂದಿದ್ದ ರಾಮನಗರ, ಕೋಲಾರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ನೂರಾರು ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಕರೊನಾ ಪಾಸಿಟಿವ್ ಬಂದಿದೆ. ಎರಡು ದಿನಗಳ ಹಿಂದೆ ಎಸ್ಪಿ ಗಿರೀಶ್ ಅವರ ಪತ್ನಿಗೂ ಕರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಎಸ್ಪಿ ಅವರಿಗೂ ಸೋಂಕು ತಗುಲಿದೆ.