ಅಲ್ಲು ಅರ್ಜುನ್​ಗೆ ಕರೊನಾ ಪಾಸಿಟಿವ್​: ನನ್ನ ಬಗ್ಗೆ ಚಿಂತಿಸದಿರಿ ಎಂದ ಟಾಲಿವುಡ್​ ನಟ

allu arjun
Published on

ಹೈದರಾಬಾದ್​: ಬಾಲಿವುಡ್​, ಸ್ಯಾಂಡಲ್​ವುಡ್​ ದಿಗ್ಗಜರನ್ನೂ ಕಾಡಿರುವ ಮಹಾಮಾರಿ ಕರೊನಾ ಸೋಂಕು, ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್​ಗೂ ತಗುಲಿದೆ.

ಈ ಬಗ್ಗೆ ಸ್ವತಃ ಅಲ್ಲು ಅರ್ಜುನ್​ ಅವರೇ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 'ನನಗೆ ಕರೊನಾ ಪಾಸಿಟಿವ್ ಬಂದಿದೆ. ಸದ್ಯ ಹೋಂ ಐಸೋಲೇಷನ್​ಗೆ ಒಳಗಾಗಿದ್ದೇನೆ. ಇತ್ತೀಚಿಗೆ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ದಯವಿಟ್ಟು ಕರೊನಾ ಟೆಸ್ಟ್​ ಮಾಡಿಸಿಕೊಳ್ಳಿ. ನಾನು ಆರೋಗ್ಯವಾಗಿದ್ದೇನೆ, ಯಾರೊಬ್ಬರು ನನ್ನ ಬಗ್ಗೆ ಚಿಂತಿಸದಿರಿ' ಎಂದು ಅಭಿಮಾನಿಗಳಿಗೆ ಅಲ್ಲು ಅರ್ಜುನ್​ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net