

ರಾಮನಗರ: ಕೋವಿಡ್ಗೆ ನಗರಸಭೆ ಚುನಾವಣಾ ಅಭ್ಯರ್ಥಿ ಲೀಲಾ ಗೋವಿಂದರಾಜ್(42) ಕೋವಿಡ್ಗೆ ಬಲಿಯಾಗಿದ್ದಾರೆ.
ರಾಮನಗರ ನಗರಸಭೆಯ 4ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೀಲಾ ಗೋವಿಂದರಾಜು ಸ್ಪರ್ಧಿಸಿದ್ದರು. ಏ.27ರಂದು ಮತದಾನ ನಡೆದಿತ್ತು. ನಾಳೆ(ಏ.30) ಮತ ಏಣಿಕೆ ನಡೆಯಲಿದೆ.
ಈ ನಡುವೆ ಲೀಲಾಗೆ ಕರೊನಾ ಸೋಂಕು ತಗುಲಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ನಗರಸಭೆ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಅಭ್ಯರ್ಥಿ ಮೃತಪಟ್ಟ ಸುದ್ದಿ ಕೇಳಿ ಅವರ ಬೆಂಬಲಿಗರು ಸೇರಿದಂತೆ ಕುಟುಂಬಸ್ಥರು ದುಃಖಿತರಾಗಿದ್ದಾರೆ.