

ಶಿವಮೊಗ್ಗ: ಯೋಗದಿಂದ ಸುಪ್ತ ಮನಸ್ಸು ಮತ್ತು ಜಾಗೃತ ಮನಸ್ಸು ಹೆಚ್ಚು ಕ್ರಿಯಾಶೀಲವಾಗುತ್ತದೆ ಎಂದು ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೇಳಿದರು.
ಜಿಲ್ಲಾ ಸ್ಕೌಟ್ ಭವನದಲ್ಲಿ ಶನಿವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಆಯೋಜಿಸಿದ್ದ ಯೋಗೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಇತಿಹಾಸದಲ್ಲಿ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸವಿದೆ. ಹಿಂದೆ ಋಷಿ-ಮುನಿಗಳು ಹಾಗೂ ತಪಸ್ವಿಗಳು ಯಾವುದೇ ಕಾಯಿಲೆ ಇಲ್ಲದೇ ಯೋಗದ ಮುಖಾಂತರ ಮಾತ್ರ ಗುಣಮಾಡಿಕೊಂಡು ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು ಎಂದರು.
ಯೋಗಾಸನ ಬುದ್ಧಿ, ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿಡುವ ದಿವ್ಯಶಕ್ತಿ ಹೊಂದಿದೆ. ಔಷಧಿಗಳು ಕೇವಲ ಶೇ. 20ರಷ್ಟು ದೇಹದಲ್ಲಿ ಕೆಲಸ ಮಾಡಿದರೆ ಯೋಗವು ಶೇ.100ರಷ್ಟು ಕಾಯಿಲೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ್ ಎಸ್ ಹಿಂಡಸಗಟ್ಟಿ ಮಾತನಾಡಿದರು. ಆಯುಷ್ ಇಲಾಖೆ ಬಿ.ಆರ್.ಮಹೇಂದ್ರ ಮತ್ತು ಸಿ.ಎಸ್.ಮೋನಿಕಾ ಯೋಗಾಸನ ಮಾಡಿಸಿದರು. ಮುಖ್ಯ ಆಯುಕ್ತೆ ಕೆ.ಪಿ.ಬಿಂದುಕುಮಾರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ, ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಡಾ. ಅನಿಲ್ಕುಮಾರ, ಚೂಡಾಮಣಿ ಪವಾರ, ವೈ.ಆರ್.ವೀರೇಶಪ್ಪ, ಡಾ. ಸುರೇಂದ್ರ, ವಿಜಯಕುಮಾರ, ಎಚ್.ಶಿವಶಂಕರ, ಗೀತಾ ಚಿಕ್ಕಮಠ, ರಾಜೇಶ ಅವಲಕ್ಕಿ, ಕೃಷ್ಣಸ್ವಾಮಿ, ಮಲ್ಲಿಕಾರ್ಜುನ ಇದ್ದರು.