ಒಂದೇ ಮಳೆಗೆ ಕೊಚ್ಚಿಹೋದ ಕಾಂಕ್ರೀಟ್ ರಸ್ತೆ

15 tth 02
ಮಳೆ ನೀರಿನಿಂದ ಕೊಚ್ಚಿಹೋಗಿರುವ ಹಾದಿಗಲ್ಲು ಹರಿಜನ ಕೇರಿಯ ಕಾಂಕ್ರೀಟ್ ರಸ್ತೆ.
Published on

ತೀರ್ಥಹಳ್ಳಿ: ಶಾಸಕರ ಅನುದಾನದಲ್ಲಿ ಮೂರು ತಿಂಗಳ ಹಿಂದಷ್ಟೇ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಹಾದಿಗಲ್ಲು ಹರಿಜನಕೇರಿಯ ಕಾಂಕ್ರೀಟ್ ರಸ್ತೆ ಮಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಅತ್ಯಂತ ಕಳಪೆ ಕಾಮಗಾರಿಯಿಂದಾಗಿ ಈ ರಸ್ತೆಗೆ ಹೊಂದಿಕೊಂಡು ನಿರ್ಮಿಸಿದ್ದ ಮೋರಿ ಕಟ್ಟೆ ಕೂಡ ಕುಸಿದು ಬಿದ್ದಿದೆ. ಈ ಕಾಮಗಾರಿ ಆರಂಭದಲ್ಲೇ ಕಳಪೆಯಾಗುತ್ತಿರುವ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತಂದರೂ ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಮತ್ತು ಕಾಮಗಾರಿ ಕಳಪೆಯಾಗುವುದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net