ಕರ್ನಾಟಕದ ಜನಸಂಖ್ಯೆಯಲ್ಲಿ ಮುಸ್ಲಿಮರೇ ನಂ.1 ಅಂತೆ!

ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರೇ ನಂ.1 ಅಂತೆ! - youtube
Published on

ಬೆಂಗಳೂರು: ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ಮೊದಲ ಸ್ಥಾನದಲ್ಲಿದೆಯಂತೆ. ಹೀಗಂತ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಜಾತಿ ಜನಗಣತಿ ಬಿಡುಗಡೆಯಾದರೆ ಮುಸ್ಲಿಂ ಸಮುದಾಯ ನಂಬರ್ ಒನ್ ಸ್ಥಾನದಲ್ಲಿ ಇರುತ್ತದೆ. ಸೆನ್ಸಸ್ ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ರಾಜ್ಯ ಒಂದು ವಿಶಿಷ್ಟವಾದ ರಾಜ್ಯ, ಸಕಲ ಧರ್ಮಗಳ ಬೀಡು. ರಾಜ್ಯದ ಎಲ್ಲ ಜನಾಂಗದ ಆರ್ಶೀವಾದ ಇದ್ದರಷ್ಟೇ ಯಶಸ್ಸು ಸಾಧ್ಯ. ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಕೆಲವರು ಆ ಸಮುದಾಯಕ್ಕೆ ಏನೂ ಸಿಕ್ಕಿಲ್ಲ, ಈ ಸಮುದಾಯಕ್ಕೆ ಏನೂ ಕೊಟ್ಟಿಲ್ಲ ಎಂದು ಬೊಬ್ಬೆ ಹಾಕುತ್ತಾರೆ. ಜನಸಂಖ್ಯೆಯ ಶೇ.7ರಷ್ಟು ಇದ್ದುಕೊಂಡೇ ಕೆಲವು ಅದು-ಇದು ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ದಲಿತ ಸಮುದಾಯ ಎಲ್ಲವೂ ಒಟ್ಟುಗೂಡಿದಾಗ ಮಾತ್ರವೇ ಅವರೇ ರಾಜ್ಯದಲ್ಲಿ ನಂಬರ್​ ಒನ್​ ಸ್ಥಾನದಲ್ಲಿರುತ್ತಾರೆ. ಇಲ್ಲವಾದರೆ ಜನಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ಮೊದಲ ಸ್ಥಾನ ಪಡೆಯುತ್ತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net