ನಿಮ್ಮ ಪ್ರೀತಿ-ವಿಶ್ವಾಸಕ್ಕೆ ನಾನು ಕರಗಿ ಹೋದೆ... ಅರಳಿಕಟ್ಟೆ ಮೇಲೆ ಕೂತು ಗ್ರಾಮಸ್ಥರ ಸಮಸ್ಯೆ ಆಲಿಸುತ್ತಾ ಭಾವುಕರಾದ ಸಿಎಂ

chikkaballapur cm
Published on

ಚಿಕ್ಕಬಳ್ಳಾಪುರ: ಅಲೆದಾಟ ಬೇಕಿಲ್ಲ...ಇಂದು ನಾಳೆ ಎಂಬ ಸುತ್ತಾಟವಿಲ್ಲ...'ಕಂದಾಯ ದಾಖಲೆಗಳು ಮನೆ ಬಾಗಿಲಿಗೆ' ಎಂಬ ಹೊಚ್ಚ ಹೊಸ ಯೋಜನೆಗೆ ಚಿಕ್ಕಬಳ್ಳಾಪುರ ತಾಲೂಕಿನ ಗುಂರ್ಗಿಲಹಳ್ಳಿಯಲ್ಲಿ ಶನಿವಾರ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಗ್ರಾಮದ ಅರಳಿಕಟ್ಟೆ ಮೇಲೆ ಕುಳಿತು ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಕರಗಿ ಹೋಗಿದ್ದೇನೆ. ಉತ್ಸಾಹದಿಂದ ಸ್ವಾಗತ ಕೋರಿದ್ರಿ, ಪ್ರೀತಿ-ಅಕ್ಕರೆಯಿಂದ ಮನೆ ಬಾಗಿಲಿಗೆ ಬರಮಾಡಿಕೊಂಡಿರಿ, ದಾಖಲೆ ಪತ್ರಗಳನ್ನ ಸ್ವೀಕಾರ ಮಾಡಿದ್ದೀರಿ. ಗುಂಗಿರ್ಲಹಳ್ಳಿ ಗ್ರಾಮಕ್ಕೆ ಬಂದದ್ದು ನನಗೆ ಬಹಳ ಸಂತೋಷ ಆಗಿದೆ ಎಂದು ಸಿಎಂ ಭಾವುಕರಾಗಿ ಹೇಳಿದರು. ಗ್ರಾಮಸ್ಥರೂ ಮೆಚ್ಚುಗೆ ವ್ಯಕ್ತಪಡಿಸಿದರು.

4,72,371 ಪಹಣಿಗಳು, 78,976 ಅಟ್ಲಾಸ್​ ಪ್ರತಿಗಳು, 2,07,892 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಹಾಗೂ ಇತರ ದಾಖಲೆಗಳನ್ನು ಉಚಿತವಾಗಿ ವಿತರಿಸಲು ಯೋಜಿಸಲಾಗಿದೆ.

ಕಾರ್ಯಕ್ರಮಕ್ಕೂ ಮುನ್ನಾ ದಿನವೇ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ, ಕಸದ ರಾಶಿ ತೆರವು, ಅಗತ್ಯವಿರುವೆಡೆ ಆಕರ್ಷಣೆಗೆ ಬಣ್ಣ ಬಳಿಯುವಿಕೆ, ಸಂವಾದಕ್ಕೆ ಅರಳಿಕಟ್ಟೆಯನ್ನ ಸಿಂಗರಿಸಿದ್ದು ಆಕರ್ಷಕವಾಗಿತ್ತು.

ಕಂದಾಯ ಸಚಿವ ಆರ್. ಅಶೋಕ್, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಶಾಸಕ ವೈ.ಎ. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಪಿ.ಶಿವಶಂಕರ್, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ವಿ.ನಾಗರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net