

ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಯ ಚೇರ್ಮನ್, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರಿಗೆ ಇಂದು(ಆಗಸ್ಟ್ 2) ಹುಟ್ಟುಹಬ್ಬದ ಸಂಭ್ರಮ. ನಾಡಿನಾದ್ಯಂತ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಗಣ್ಯರು, ಸ್ವಾಮೀಜಿಗಳು, ಸಾರ್ವಜನಿಕರು, ವಿಆರ್ಎಲ್ ಸಂಸ್ಥೆಯ ಉದ್ಯೋಗಿಗಳು-ಅವರ ಕುಟುಂಬಸ್ಥರು, ಸ್ನೇಹಿತರು ಜನ್ಮದಿನಕ್ಕೆ ಶುಭಕೋರಿದ್ದಾರೆ.
'ರಾಜ್ಯದ ಯಶಸ್ವಿ ಉದ್ಯಮಿಗಳು ವಿಆರ್ಎಲ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಆತ್ಮೀಯ ಶ್ರೀ ವಿಜಯ ಸಂಕೇಶ್ವರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ' ಎಂದು ಟ್ವೀಟ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭಕೋರಿದ್ದಾರೆ.
'ಯಶಸ್ವಿ ಉದ್ಯಮಿಗಳು, ನನ್ನ ಆತ್ಮೀಯರಾದ ಶ್ರೀ ವಿಜಯ ಸಂಕೇಶ್ವರ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ' ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.