ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಭಾಸ್ಕರ ಸ್ವಾಮೀಜಿ ಲಿಂಗೈಕ್ಯ

Sri Jnana Bhaskara Swamiji
Published on

ಹಿರಿಯೂರು: ನಗರದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಧರ್ಮಪೀಠದ ಶ್ರೀ ಜ್ಞಾನಭಾಸ್ಕರ ಸ್ವಾಮೀಜಿ(75) ಗುರುವಾರ ಲಿಂಗೈಕ್ಯರಾದರು. ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ.

ಗುರುವಾರ ಬೆಳಗ್ಗೆ ಶ್ರೀಗಳು ಸ್ನಾನಕ್ಕೆ ಹೋದ ವೇಳೆ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದಾರೆ. ಶ್ರೀಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಭಕ್ತರು ಜಮಾಯಿಸಿದ್ದಾರೆ. 30 ವರ್ಷಗಳ ಹಿಂದೆಯೇ ಜ್ಞಾನಭಾಸ್ಕರ ಸ್ವಾಮೀಜಿ ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net