ಕಾಲೇಜು ಶೌಚಗೃಹದಲ್ಲೇ ಮಗುವಿಗೆ

arrested
Published on

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಕ್ಯಾಂಪಸ್‌ನ ಶೌಚಗೃಹದಲ್ಲೇ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಯಿ-ಮಗುವನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಮೂಲದ 17 ವರ್ಷದ ವಿದ್ಯಾರ್ಥಿನಿ, ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಕರ ಮುಳಬಾಗಿಲಿನ ನಿವಾಸಿ ಅನಿಲ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2 ವರ್ಷಗಳಿಂದ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಕೋಲಾರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಮತ್ತು ಕಾಲೇಜಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದು, ವಿದ್ಯಾರ್ಥಿನಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

2023ರಲ್ಲೂ ಇಂಥದ್ದೇ ಘಟನೆ
ಇದೇ ಕಾಲೇಜಿನಲ್ಲಿ 2023ರಲ್ಲೂ ಇಂಥದ್ದೇ ಘಟನೆ ಸಂಭವಿಸಿತ್ತು. ಆಗ ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳಿಗೆ ಶೌಚಗೃಹದಲ್ಲಿ ಮಗು ಜನಿಸಿತ್ತು. ಈ ವೇಳೆ ಬಾಲಕಿ, ಮಗುವಿನ ಕತ್ತು ಹಿಸುಕಿ ಸಾಯಿಸಿ ಶೌಚಗೃಹದ ಒಳಗೆ ತುರುಕಿದ್ದಳು. ನಂತರ ಹೊರಗೆ ಬಂದು ರಕ್ತಸ್ರಾವವಾಗಿದ್ದು, ತಾಯಿಯನ್ನು ಕರೆಸುವಂತೆ ಉಪನ್ಯಾಸಕರಿಗೆ ಹೇಳಿದ್ದಳು. ನಂತರ ಸ್ವಚ್ಛತಾ ಸಿಬ್ಬಂದಿ ಶೌಚಗೃಹ ಸ್ವಚ್ಛಗೊಳಿಸಲು ಹೋದಾಗ ಮಗುವಿರುವುದು ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಬಾಲಕಿ, ಮಗುವನ್ನು ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net