ಯೂಕ್ರೇನ್​ನ ಚರ್ನೋಬಿಲ್​ ಪರಮಾಣು ವಿದ್ಯುತ್​ ಸ್ಥಾವರದಲ್ಲಿ ಡೇಟಾ ಡಿಲೀಟ್​, ಹೆಚ್ಚಿದ ಆತಂಕ

New Project(4)
Published on

ಯೂಕ್ರೇನ್​: ಯುದ್ಧಪೀಡಿತ ಯೂಕ್ರೇನ್​ನಲ್ಲಿ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ(ಎನ್‌ಪಿಪಿ)ದಲ್ಲಿ ಡೇಟಾ ಡಿಲೀಟ್​ ಆಗಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಯೂಕ್ರೇನ್​ನಲ್ಲಿ ಬಹುತೇಕ ಭಾಗದಲ್ಲಿ ಮೊಬೈಲ್​ ನೆಟ್​ವರ್ಕ್​ ಮತ್ತು ಇಂಟರ್​ನೆಟ್​ ಸಂಪರ್ಕವೂ ಸಿಗುತ್ತಿಲ್ಲ.

ಎನ್​ಪಿಪಿಯಲ್ಲಿ ಮಾಹಿತಿ ಸಂಪರ್ಕವನ್ನು ಕಳೆದುಕೊಂಡಿದೆ. ರಕ್ಷಣಾ ಮಾನಿಟರಿಂಗ್ ಸಿಸ್ಟಂಗಳಿಂದ ಡೇಟಾ ರವಾನಿಸುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಮಹಾನಿರ್ದೇಶಕ ರಾಫೆಲ್ ಗ್ರಾಸ್ಸಿ ತಿಳಿಸಿದ್ದಾರೆ.

ಯೂಕ್ರೇನ್​ ಮೇಲೆ ದಾಳಿ ಮಾಡಿರುವ ರಷ್ಯಾ ಸೇನಾಪಡೆಯು ಕಳೆದ ವಾರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net