

ಚನ್ನಪಟ್ಟಣ: ಬೀಗರ ಮನೆಯಲ್ಲಿ ಊಟ ಮುಗಿಸಿಕೊಂಡು ಮಂಡ್ಯದಿಂದ ಬೆಂಗಳೂರಿಗೆ ವಾಪಸ್ ಹೊರಟ್ಟಿದ್ದ ಇಬ್ಬರು ಮಾರ್ಗಮಧ್ಯೆ ದುರಂತ ಅಂತ್ಯ ಕಂಡಿದ್ದಾರೆ.
ಬೆಂಗಳೂರು ಮೂಲದ ಅಮರೇಶ್ (49) ಹಾಗೂ ಕಾಂತರಾಜು (43) ಮೃತರು. ಇವರಿಬ್ಬರೂ ಮಂಡ್ಯದಲ್ಲಿ ಬೀಗರ ಔತಣಕೂಟದಲ್ಲಿ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬೈಕ್ನಲ್ಲಿ ಶುಕ್ರವಾರ ಸಂಜೆ ವಾಪಸ್ ಹೋಗುತ್ತಿದ್ದರು. ಮಾರ್ಗಮಧ್ಯೆ ಬೆಂಗಳೂರು-ಮೈಸೂರು ಹೆದ್ದಾರಿಯ ವಂದಾರಗುಪ್ಪೆ ವಂದಾರಗುಪ್ಪೆ ಸಮೀಪ ಕುವೆಂಪು ಕಾಲೇಜು ಬಳಿ ಇರುವ ತಿರುವಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಅಮರೇಶ್ ಸ್ಥಳದಲ್ಲೇ ಮೃತಪಟ್ಟರೆ, ಕಾಂತರಾಜು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದರು. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.