More

    ಕುಡಿದು ಸಿಟ್ಟಿನಿಂದ ಸಿಎಂಗೆ ಬೈದಿದ್ದೀನಿ… ದಯವಿಟ್ಟು ಕ್ಷಮಿಸಿ: ಶಾಬಾಜ್​ ಉಲ್ಲಾಖಾನ್​

    ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಗೆ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ವಿಡಿಯೋ ಹರಿಯಬಿಟ್ಟ ಮುಸ್ಲಿಂ ವ್ಯಕ್ತಿ ಶಾಬಾಜ್ ಉಲ್ಲಾಖಾನ್​ಗೆ ದಿಗ್ವಿಜಯ ನ್ಯೂಸ್​ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಸಿಎಂಗೆ ಅವಾಜ್ ಹಾಕಿದ್ದರ ಕುರಿತು ದಿಗ್ವಿಜಯ ನ್ಯೂಸ್​ಗೆ ಸ್ಪಷ್ಟನೆ ಕೊಡುವಾಗಲೂ ಮೊಂಡುವಾದ ಮಾಡುತ್ತಾ, ನನ್ನ ಮುಸಲ್ಮಾನರ ಸಮಸ್ಯೆ ಬಗ್ಗೆ ನಾನು ಮಾತನಾಡಬೇಕು. ಅದಕ್ಕೆ ಸಿಎಂ ಅವರನ್ನ ಭೇಟಿ ಮಾಡಿ ಮಾತನಾಡಬೇಕು. ಅದಕ್ಕೆ ಅವಕಾಶ ಮಾಡಿಕೊಡಿ ಎಂದಿದ್ದಾನೆ.

    ಸಿಎಂ ಅವರನ್ನು ಪ್ರಶ್ನೆ ಮಾಡಿದ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಕೆಟ್ಟಕೆಟ್ಟ ಪದಗಳನ್ನ ಬಳಸಿ ಸಿಎಂ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದು ಸರಿಯೇ? ಮೊದಲು ನಿಮಗೆ ಏನು ಬೇಕು? ನಿಮ್ಮ ಸಮಸ್ಯೆ ಏನು ಎಂದು ಮೊದಲು ಕ್ಲಾರಿಟಿ ಕೊಡಿ ಎಂದು ದಿಗ್ವಿಜಯ ನ್ಯೂಸ್​ ಪ್ರಶ್ನಿಸಿದರೂ ಉಲ್ಟಾ-ಪಲ್ಟಾ ಮಾತನಾಡುತ್ತಾ ನಮಗೆ ಅನ್ಯಾಯ ಆಗಿದೆ. ಅದಕ್ಕೆ ಸಿಟ್ಟಲ್ಲಿ ಮಾತಾಡಿದೆ ಎಂದು ವಾದಿಸಿದರು.

    ಇದೇ ವೇಳೆ ಹರೀಶ್​ ಪೂಂಜ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಾಗ ‘ಸಿಟ್ಟಲ್ಲಿ ನಾನು ಮಾತಾಡಿದೆ. ಮದರಸಾದಲ್ಲಿ ಇಂತಹದ್ದನ್ನೆಲ್ಲ ಹೇಳಿಕೊಡಲ್ಲ. ಕೋಪದಲ್ಲಿ ನಾನು ಮಾತಾಡಿದೆ. ಇದಕ್ಕೆ ಮದರಸಾವನ್ನು ಹೊಣೆ ಮಾಡಬೇಡಿ ಎಂದು ಮತ್ತೆ ಮೊಂಡು ವಾದ ಮಾಡಿದೆ’ ಎಂದು ಶಾಬಾಜ್ ಉಲ್ಲಾಖಾನ್​ ಹೇಳುತ್ತಿದ್ದಂತೆ, ದಿಗ್ವಿಜಯ ನ್ಯೂಸ್ ನಿರೂಪಕಿ ಮಮತಾ ಹೆಗ್ಡೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡರು.

    ‘ಕುಡಿದು ಸಿಟ್ಟಿನಿಂದ ವಿಡಿಯೋ ಮಾಡಿದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಸಿಎಂ ಅವರು ತಂದೆ ಸಮಾನ ಅಲ್ಲವೇ? ಮಕ್ಕಳು ತಪ್ಪು ಮಾಡಿದ್ರೆ ಕ್ಷಮಿಸಬೇಕು’ ಎಂದು ಶಾಬಾಜ್ ಉಲ್ಲಾಖಾನ್​ ಹೇಳಿದರು.

    ನಾನು ಸತ್ತ ನಂತ್ರ ಬೇರೆ ಮದ್ವೆ ಆಗಿ ಆಕೆಗೂ ಕಾಟ ಕೊಡ್ಬೇಡ… ಡೆತ್​ನೋಟ್ ಬರೆದು ಬೆಂಗ್ಳೂರಲ್ಲಿ ಪತ್ರಕರ್ತೆ ಆತ್ಮಹತ್ಯೆ

    ತಹಸೀಲ್ದಾರ್​ರನ್ನು ಬಂಧಿಸಲು ಮನೆ ಬಾಗಿಲಲ್ಲೇ ಬೆಳಗಿನಜಾವದಿಂದ ಕಾಯುತ್ತಾ ಕುಳಿತ ಎಸ್​ಪಿ!

    ದೊಡ್ಡಪ್ಪನಿಂದಲೇ ಅತ್ಯಾಚಾರ, ತೀವ್ರ ರಕ್ತಸ್ರಾವವಾಗಿ 2 ವರ್ಷದ ಕಂದಮ್ಮ ಸಾವು: ಆನೇಕಲ್​ನಲ್ಲಿ ಅಮಾನುಷ ಘಟನೆ

    ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts