ತಹಸೀಲ್ದಾರ್​ರನ್ನು ಬಂಧಿಸಲು ಮನೆ ಬಾಗಿಲಲ್ಲೇ ಬೆಳಗಿನಜಾವದಿಂದ ಕಾಯುತ್ತಾ ಕುಳಿತ ಎಸ್​ಪಿ!

New Project(18)
Published on

ಮುಂಡಗೋಡ: ಇಲ್ಲಿನ ತಹಸೀಲ್ದಾರ್ ಶ್ರೀಧರ ಮುಂದಲಮನೆ ಅವರ ಬಂಧನಕ್ಕೆ ಕಲಬುರಗಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್.ಪಿ. ರಶ್ಮಿ ಅವರು ಮುಂಡಗೋಡಕ್ಕೆ ಆಗಮಿಸಿದ್ದಾರೆ.

2014ನೇ ಬ್ಯಾಚ್​ನಲ್ಲಿ ಕೆಎಎಸ್​ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಕೊಪ್ಪಳ ಜಿಲ್ಲೆ ಯಲಬುರ್ಗಾ ಸನಿಹದ ಕುಕನೂರು ಗ್ರಾಮದ ಶ್ರೀಧರ ಮುಂದಲಮನೆ ಸದ್ಯ ಮುಂಡಗೋಡ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ನೌಕರಿ ಪಡೆದಿದ್ದಾರೆ ಎಂಬ ದೂರು ದಾಖಲಾಗಿದ್ದು, ತಹಸೀಲ್ದಾರ್​ ಬಂಧನಕ್ಕೆ ರಶ್ಮಿ ಸೇರಿ ನಾಲ್ವರು ಶುಕ್ರವಾರ ಬೆಳಗಿನ ಜಾವ ಆಗಮಿಸಿದ್ದಾರೆ. ತಹಸೀಲ್ದಾರ್ ಮನೆ ಮುಂದೆ ಹಾಗೂ ಹಿಂದೆ ಕಾಯುತ್ತಾ ಕುಳಿತ್ತಿದ್ದಾರೆ. 10 ಗಂಟೆಯಾದರೂ ತಹಸೀಲ್ದಾರ್​ರ ಮನೆ ಬಾಗಿಲು ತೆರೆದಿಲ್ಲ.

ಶ್ರೀಧರ ಮುಂದಲಮನೆ ಅವರು ತಾನು ವಾಲ್ಮೀಕಿ ಎಂದು ನಕಲಿ ಜಾತಿ ಪ್ರಮಾಣಪತ್ರ ನೀಡಿ ಕೆಲಸಕ್ಕೆ ಸೇರಿದ್ದಾರೆ ಎಂದು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ 2022ರ ಫೆಬ್ರವರಿ​ 12ರಂದು ಗೀರೀಶ ರೊಡಕರ ಎಂಬುವರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net