ನೊಬೆಲ್ ವಿಶ್ವ ದಾಖಲೆ ಸೇರಿತು ಚನ್ನಪಟ್ಟಣದ ಶಿವಕುಮಾರ್ ಸಾಧನೆ

Channapatna SHivakumar NAME Nobel World record
Published on

ಚನ್ನಪಟ್ಟಣ: ಒಂದು ಲೀಟರ್ ಪ್ಲಾಸ್ಟಿಕ್ ನೀರಿನ ಬಾಟಲಿ ಮೇಲೆ ‘ಡೋಂಟ್ ಯೂಸ್ ಪ್ಲಾಸ್ಟಿಕ್’ ಮತ್ತು ‘ಇಂಡಿಯಾ’ ಎಂಬ ಪದವನ್ನು 1829 ಬಾರಿ ಬರೆದಿದ್ದ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಯುವಕ ಶಿವಕುಮಾರ್ ಸಾಧನೆ ನೊಬೆಲ್ ವಿಶ್ವ ದಾಖಲೆ ಸೇರಿದೆ.

ಪ್ಲಾಸ್ಟಿಕ್ ಬಾಟಲಿ ಮೇಲಿನ ಬರಹದ ಮೂಲಕ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಶಿವಕುಮಾರ್​ ಜಾಗೃತಿ ಮೂಡಿಸಿದ್ದರು. ಬಾಟಲಿ ಮೇಲೆ ಇಂಗ್ಲಿಷ್​ ಅಕ್ಷರಗಳಲ್ಲಿ ಬರೋಬ್ಬರಿ 1,829 ಬಾರಿ ‘ಡೋಂಟ್ ಯೂಸ್ ಪ್ಲಾಸ್ಟಿಕ್’ ಎಂದು, 595 ಬಾರಿ ‘ಇಂಡಿಯಾ’ ಹಾಗೂ 292 ಬಾರಿ ‘ವರ್ಲ್ಡ್’ ಎಂದು ಬರೆದಿದ್ದರು. ಒಂದು ಬಾಟಲಿ ಮೇಲೆ 30 ಸಾವಿರ ಅಕ್ಷರಗಳನ್ನು ಬರೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದರು. ಇವರ ಸಾಧನೆ 2020ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಿತ್ತು. ಇದೀಗ ನೊಬೆಲ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಯೋಗ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಶಿವಕುಮಾರ್ ಸಾಧನೆಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ. ನೊಬೆಲ್ ವರ್ಲ್ಡ್ ರೆಕಾರ್ಡ್ಸ್ 2020ರಲ್ಲಿ ಆರಂಭವಾಗಿದ್ದು, ಗಿನ್ನಿಸ್ ನಂತರ ಜಗತ್ತಿನ ಎರಡನೇ ಅತಿದೊಡ್ಡ ರೆಕಾರ್ಡ್ ಬುಕ್ ಕಂಪನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net