ಎಚ್​ಡಿಕೆ ಕ್ಷೇತ್ರದಲ್ಲಿ ಡಯಾಲಿಸಿಸ್ ರೋಗಿಗಳ ಪರದಾಟ! ಚಿಕಿತ್ಸೆ ಸಿಗದೆ ಕಣ್ಣೀರಿಟ್ಟ ರೋಗಿಗಳು

cpt hospital
Published on

ಚನ್ನಪಟ್ಟಣ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಚಿಕಿತ್ಸೆ ಸಿಗದೆ ಡಯಾಲಿಸಿಸ್ ರೋಗಿಗಳು ಪರದಾಡುತ್ತಿದ್ದಾರೆ.

ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್​ ಕೇಂದ್ರದಲ್ಲಿ 25ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಈ ಕೇಂದ್ರದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳಲ್ಲಿ ಆತಂಕ ಮನೆ ಮಾಡಿದೆ. ಚಿಕಿತ್ಸೆಗೆ ಬೇಕಾದ ಔಷಧ ಹಾಗೂ ಸಲಕರಣೆ ಇಲ್ಲದೆ ಕೇಂದ್ರದ ಸಿಬ್ಬಂದಿ ಕೈಚೆಲ್ಲಿದ್ದಾರೆ.

ಇದುವರೆಗೂ ಬಿಆರ್​ಎಸ್ ಎಂಬ ಸಂಸ್ಥೆ ಚಿಕಿತ್ಸೆಯ ಹೊಣೆಯನ್ನು ಗುತ್ತಿಗೆ ವಹಿಸಿಕೊಂಡಿತ್ತು. ಡಯಾಲಿಸಿಸ್​ ಕೇಂದ್ರಕ್ಕೆ ಬೇಕಾಗುವ ಡ್ರಗ್ಸ್ ಮತ್ತು ಪರಿಕರಗಳನ್ನು ಪೂರೈಸುತ್ತಿತ್ತು. ಒಂದು ತಿಂಗಳ ಹಿಂದೆ ಸಂಸ್ಥೆಯ ಗುತ್ತಿಗೆ ರದ್ದಾಗಿ, ಆಸ್ಪತ್ರೆ ಆಡಳಿತವೇ ಕೇಂದ್ರದ ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ. ಆದರೆ, ಕೇಂದ್ರಕ್ಕೆ ಬೇಕಾದ ಅಗತ್ಯ ವಸ್ತು ಪೂರೈಸುವಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ವಿಜಯ ನರಸಿಂಹ, ಸಹಾಯಕ ಆಡಳಿತಾಧಿಕಾರಿ ಮಂಜೇಶ್ ಕುಮಾರ್ ವಿಫಲವಾಗಿದ್ದು, ಡಯಾಲಿಸಿಸ್​ ರೋಗಿಗಳಿಗೆ ಸಂಕಷ್ಟ ಎದುರಾಗಿದೆ.

ಇಂದು (ಗುರುವಾರ) ಬೆಳಗ್ಗೆಯಿಂದ ಚಿಕಿತ್ಸೆ ಸಿಗುತ್ತಿಲ್ಲ, ಉಸಿರಾಟಕ್ಕೆ ಸಮಸ್ಯೆಯಾಗುತ್ತಿದೆ. ಬೆಳಗ್ಗೆಯಿಂದ ಯಾರೊಬ್ಬರೂ ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಏನಾದರೂ ಹೆಚ್ಚು ಕಮ್ಮಿಯಾದರೆ ನಮ್ಮ ಗತಿಯೇನು? ಎಂದು ಡಯಾಲಿಸಸ್ ರೋಗಿ ಅರ್ಚಕ ಶಿವಕುಮಾರ್ 'ವಿಜಯವಾಣಿ' ಬಳಿ ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net