ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪೆಟ್ರೋಲ್-ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಸಾಮಾನ್ಯ ಜನರು ಹೊಟೇಲ್‌ಗೆ ಹೋದಲ್ಲಿ ಹೆಚ್ಚುವರಿಯಾಗಿ 10-15 ರೂ. ಹೆಚ್ಚಾಗಿದೆ. ಇದರಲ್ಲಿ ಹೊಟೇಲ್ ಉದ್ಯಮದವರನ್ನು ದೂರುವಂತಿಲ್ಲ. ಜನವರಿಯಲ್ಲಿ ವಾಣಿಜ್ಯ ಗ್ಯಾಸ್ ಬೆಲೆ 1691 ರೂ. ಇದ್ದದ್ದು, ಫೆಬ್ರವರಿಯಲ್ಲಿ 1740 ರೂ.ಗೆ ತಲುಪಿತು. ಮಾರ್ಚ್‌ನಲ್ಲಿ 1883, ಏಪ್ರಿಲ್‌ನಲ್ಲಿ 2191 ರೂ., ಮೇನಲ್ಲಿ 3152, ಜೂನ್‌ನಲ್ಲಿ 3198 ರೂ.ಗೆ ಬಂದು ನಿಂತಿದೆ ಎಂದರು.