

ಉತ್ತರಕನ್ನಡ: ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬುಧವಾರ ಬೆಳಗಿನ ಜಾವ ಕೆಮಿಕಲ್ ಟ್ಯಾಂಕರ್ ಸ್ಫೋಟಗೊಂಡಿದ್ದು, ಸುಮಾರು ದೂರದವರೆಗೂ ಬೆಂಕಿ ಆವರಿಸಿದೆ.
ಮಂಗಳೂರಿನಿಂದ ಗುಜರಾತಿಗೆ ತೆರಳಿತ್ತಿದ್ದ ಟ್ಯಾಂಕರ್ನಲ್ಲಿ ಅರಬೈಲ್ ಘಟ್ಟದಲ್ಲಿ ಹೋಗುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಲಾರಿ ಹೊತ್ತಿ ಉರಿಯಲಾರಂಭಿಸಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟ್ಯಾಂಕರ್ನಿಂದ ಸುಮಾರು ದೂರದವರೆಗೆ ಕೆಮಿಕಲ್ ಸೋರಿಕೆಯಾಗಿದ್ದರ ಪರಿಣಾಮ ಬೆಂಕಿ ವ್ಯಾಪಿಸಿದೆ. ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಯಲ್ಲಾಪುರ ಮತ್ತು ಮುಂಡಗೋಡು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. (ಇದಿಷ್ಟು ಬೆಳಗ್ಗೆ 9ರ ವರೆಗಿನ ಚಿತ್ರಣ)