ಸಿಮೆಂಟ್​ ತುಂಬಿದ್ದ ವಾಹನ ಪಲ್ಟಿ, ಸ್ಥಳದಲ್ಲೇ ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

accident
Published on

ವಿಜಯಪುರ: ಸಿಮೆಂಟ್ ತುಂಬಿದ್ದ ವಾಹನ ನಡುರಸ್ತೆಯಲ್ಲಿ ಪಲ್ಟಿಯಾಗಿ ಸ್ಥಳದಲ್ಲೇ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ಮುದ್ದೇಬಿಹಾಳ ತಾಲೂಕಿನ ನೆಬಗೇರಿ ಬಳಿ ಸಂಭವಿಸಿದೆ.

ಗೆದ್ದಲಮರಿ ತಾಂಡಾದ ನಿವಾಸಿ ವೆಂಕಟೇಶ ಪವಾರ(40) ಹಾಗೂ ಢವಳಗಿ ನಿವಾಸಿ ನಾಗಪ್ಪ ದಂಡೆನ್ನವರ(45) ಮೃತರು. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳದಿಂದ ನೆಬಗೇರಿಗೆ ಸಿಮೆಂಟ್​ ತುಂಬಿಕೊಂಡು ಹೋಗುವಾಗ ಅಪಘಾತ ಸಂಭವಿಸಿದೆ. ಇದನ್ನೂ ಓದಿರಿ ಬೆಂಗಳೂರಲ್ಲಿ ಮಧ್ಯರಾತ್ರಿ ತಾಯಿ-ಮಗನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net