ಪಿರಿಯಾಪಟ್ಟಣದಲ್ಲಿ ಸಂಭ್ರಮದ ಬಕ್ರೀದ್

ಪಿರಿಯಾಪಟ್ಟಣದಲ್ಲಿ ಸಂಭ್ರಮದ ಬಕ್ರೀದ್
Published on

ಪಿರಿಯಾಪಟ್ಟಣ: ಪಟ್ಟಣದಲ್ಲಿ ಸೋಮವಾರ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ 7ರಿಂದ8 ಗಂಟೆವರೆಗೆ ತಮ್ಮ ತಮ್ಮ ಬಡಾವಣೆಗಳಲ್ಲಿರುವ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಒಟ್ಟು ಸೇರಿದ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ತಾಲೂಕಿನ ಪಂಚವಳ್ಳಿ, ಅರೇನಳ್ಳಿ, ಹಲಗನಹಳ್ಳಿ, ಬೆಟ್ಟದಪುರ, ಅಂಕನಹಳ್ಳಿ ಕೊಪ್ಪಲು, ಪಾರೆ ಕೊಪ್ಪಲು, ಆಯಿರಬೀಡು, ಬೈಲಕುಪ್ಪೆ ಮತ್ತಿತರ ಗ್ರಾಮಗಳಲ್ಲಿ ಕೂಡ ಬಕ್ರೀದ್ ಪ್ರಾರ್ಥನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net