ಮೂರು ದಿನಗಳ ಹಿಂದೆ ಪಕ್ಷ ತೊರೆದ ಮಾಜಿ ಶಾಸಕನ ಮೇಲೆ ಅತ್ಯಾಚಾರ ಆರೋಪ: 1999ರಿಂದಲೇ ನಡೆಯುತ್ತಿದೆಯಂತೆ ದೌರ್ಜನ್ಯ

mla
Published on

ಥಾಣೆ: ಮಹಿಳಾ ಕಾರ್ಪೋರೇಟರ್​ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿ ಬಿಜೆಪಿಯ ಮಾಜಿ ಶಾಸಕ ನರೇಂದ್ರ ಮೆಹ್ತಾ ಸೇರಿ ಇಬ್ಬರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಶಾಸಕ ನರೇಂದ್ರ ಮೆಹ್ತಾ ಮತ್ತು ಸಂಜಯ್​ ತಾರ್ಕರ್​ ಹೆಸರಿನ ವ್ಯಕ್ತಿ 1999ರಿಂದಲೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಾರೆ. ದೂರು ನೀಡುವಂತಿಲ್ಲ ಎಂದು ಬೆದರಿಸಿದ್ದಾಗಿ ಸಂತ್ರಸ್ತೆಯೊಬ್ಬಳು ದೂರನ್ನು ನೀಡಿದ್ದಾಳೆ. ಕಾರ್ಪೋರೇಟರ್​ ಆಗಿರುವ ಆಕೆಯ ದೂರನ್ನು ಮೀರಾ ಭಾಯಂದರ್​ ನಗರದ ಪೊಲೀಸರು ದಾಖಲಿಸಿಕೊಂಡಿದ್ದು, ಎಫ್​ಐಆರ್​ ಹಾಕಿದ್ದಾರೆ.

ಮಹಿಳಾ ಕಾರ್ಪೋರೇಟರ್​ ತನ್ನ ಅಳಲನ್ನು ಹೇಳಿಕೊಳ್ಳುತ್ತಿರುವ ವಿಡಿಯೋ ಕಳೆದೆರೆಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಆರೋಪಿ ನರೇಂದ್ರ ಮೆಹ್ತಾ ಮಹಾರಾಷ್ಟ್ರದ ಮೀರಾ ಭಾಯಂದರ್​ ಕ್ಷೇತ್ರದ ಬಿಜೆಪಿ ಶಾಸಕನಾಗಿದ್ದು ಮೂರು ದಿನಗಳ ಹಿಂದೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳೂ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net