VIDEO: ರಸ್ತೆ ಮಧ್ಯೆ ಧಗಧಗ ಉರಿದ ಕಾರು; ಕಾರಣ ಎಣ್ಣೆ ಬಾಟಲಿಗಳು...!

Car 24 may 20
Published on

ಬೆಂಗಳೂರು: ಬಿಇಎಲ್​ ಸಮೀಪ ಅಪಘಾತಕ್ಕೀಡಾದ ಕಾರು, ರಸ್ತೆ ಮಧ್ಯೆಯೇ ಬೆಂಕಿಗೆ ಆಹುತಿಯಾಗಿದೆ. ಇಡೀ ಕಾರು ಧಗಧಗನೇ ಉರಿದಿದೆ.

ಬಿಇಎಲ್​ ಸಿಗ್ನಲ್​ ಸಮೀಪ ಕಾರು ಪಲ್ಟಿ ಹೊಡೆದು ಅಪಘಾತಕ್ಕೀಡಾಗಿದೆ. ಅದರಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತಕ್ಕೀಡಾದ ತಕ್ಷಣವೇ ಕಾರಿನಿಂದ ಹೊಗೆ ಬರಲು ಪ್ರಾರಂಭವಾಯಿತು. ಬೆಂಕಿ ಹೊತ್ತಿಕೊಳ್ಳುವುದಕ್ಕೂ ಮೊದಲೇ ಅದರಲ್ಲಿದ್ದವರೆಲ್ಲ ಹೊರಗೆ ಬಂದಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ.

ಇಷ್ಟೊಂದು ಬೆಂಕಿ ಹೊತ್ತಿಕೊಳ್ಳಲು ಕಾರಿನ ಡಿಕ್ಕಿಯಲ್ಲಿದ್ದ ಮದ್ಯದ ಬಾಟಲಿಗಳೇ ಕಾರಣ ಎನ್ನಲಾಗಿದೆ. ಮದ್ಯದ ಟಿನ್​​ಗಳೆಲ್ಲ ಸಂಪೂರ್ಣ ಬ್ಲಾಸ್ಟ್​ ಆಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಕಾರು ಧಗಧಗನೆ ಹೊತ್ತಿ ಉರಿದ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net