ಹುಲಜಂತಿ ಜಾತ್ರೆಗೆ ಪಾದಯಾತ್ರೆ ಹೊರಟಿದ್ದವರ ಮೇಲೆ ಹರಿದ ಕಾರು: ರಾಯಚೂರಿನ ಮೂವರ ಸಾವು

New Project (18)
Published on

ಉಮದಿ(ಮಹಾರಾಷ್ಟ್ರ): ಹುಲಜಂತಿ ಮಹಾಲಿಂಗರಾಯ ಜಾತ್ರೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮೂವರು ಭಕ್ತರು ಉಮದಿ ಸಮೀಪ ಶನಿವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾನೆ.

ಉಮದಿ ಬಳಿ ಶೇವಾಳೆ ವಸ್ತಿ ಹತ್ತಿರ ಟಯರ್ ಒಡೆದು ಚಾಲಕನ ನಿಯಂತ್ರಣ ತಪ್ಪಿದ ಕಾರು ಪಾದಯಾತ್ರಿಗಳ ಮೇಲೆ ಹರಿದಿದೆ. ಈ ದುರ್ಘಟನೆಯಲ್ಲಿ ಲಿಂಗಸುಗೂರು ತಾಲೂಕಿನ ಯಾದಬಾವಿಯ ಬಸಪ್ಪ ಊರ್ ಬಸವರಾಜ ದುರ್ಗಪ್ಪ ಚಿಂಚವಡೆ, ದೇವರಭೂಸೂರಿನ ನಾಗಪ್ಪ ಸೋಮಣ್ಣ ಅಚನಾಳ ಮತ್ತು ದೇವೂರ ಗ್ರಾಮದ ಮಹಾಣಪ್ಪ ದುರ್ಗಪ್ಪ ಕೊಡೆಕಲ್ಲ ಮೃತಪಟ್ಟಿದ್ದಾರೆ. ಇದೇ ಘಟನೆಯಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net