

ಹಾವೇರಿ: ಮನೆ ಮುಂದೆ ತನ್ನ ಪಾಡಿಗೆ ತಾನು ಪಾತ್ರೆ ತೊಳೆಯುತ್ತ ಕೂತಿದ್ದ ವೃದ್ಧೆಯೊಬ್ಬರ ಮೇಲೆ ಕಾರು ಹರಿದಿದ್ದು, ತೀವ್ರ ಗಾಯಗೊಂಡ ಅಜ್ಜಿ ಸ್ಥಳದಲ್ಲೇ ಪ್ರಾಣ ಬಿಟ್ಟ ಘಟನೆ ಹಾನಗಲ್ ತಾಲೂಕಿನ ಬಾಳಂಬಿಡ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಮಾಳವ್ವ ಕಾಸಣ್ಣನವರ (75) ಮೃತ ದುರ್ದೈವಿ. ಬಾಳಂಬಿಡ ಗ್ರಾಮದ ನಿವಾಸಿಯಾದ ಮಾಳವ್ವ ತನ್ನ ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದರು. ಇದೇ ವೇಳೆ ಹಾವೇರಿಯಿಂದ ಹಾನಗಲ್ ಕಡೆಗೆ ವೇಗವಾಗಿ ಹೋಗುತ್ತಿದ್ದ ಸ್ಕೋಡಾ ಕಾರು, ಚಾಲಕನ ನಿಯಂತ್ರಣ ತಪ್ಪಿ ವೃದ್ಧೆಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿರಿ ಅವ್ವ-ಅಜ್ಜಿ ಜತೆ ಮದುವೆ ಮಾತುಕತೆಗೆ ಬಂದವ ಅಕ್ಕ-ತಂಗಿ ಮೇಲೆ ಮಚ್ಚುಬೀಸಿದ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ತೀವ್ರ ರಕ್ತಸ್ರಾವವಾಗಿ ಅಜ್ಜಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಈ ದೃಶ್ಯಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.